ದಿನದ ಸುದ್ದಿ

ಶಾಕಿಂಗ್ : ಡಾಲರ್ ಎದುರು ರೂಪಾಯಿ ಬೆಲೆ ಸಾರ್ವಕಾಲಿಕ ಕುಸಿತ !

Published

on

ಸುದ್ದಿದಿನ ಡೆಸ್ಕ್: ನಿರೀಕ್ಷೆಯಂತೆ ರೂಪಾಯಿ ಬೆಲೆಯು ಡಾಲರ್ ಮುಂದೆ 70.8ಗೆ ಕುಸಿದಿದ್ದು, ಸಾರ್ವಕಾಲಿಕ ಕುಸಿತ ಕಂಡಿದೆ.

ಟರ್ಕಿ ಆರ್ಥಿಕ ಬಿಕ್ಕಟ್ಟು ಇದಕ್ಕೆ ಮುಖ್ಯ ಕಾರಣ. ಟರ್ಕಿ ಕರೆನ್ಸಿ ಲಿರಾ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದಿರುವ ಪರಿಣಾಮ ಅದನ್ನು ಅವಲಂಬಿಸಿರುವ ಇತರೆ ದೇಶಗಳ ಮಾರುಕಟ್ಟೆಯಲ್ಲೂ ಕುಸಿತ ಕಂಡುಬಂದಿದೆ.

ದಿನಗಳ ಹಿಂದಷ್ಟೆ 69ರ ಹತ್ತರಕ್ಕೆ ಬಂದಿದ್ದ ರೂಪಾಯಿ ಮೌಲ್ಯವು 70ರ ಗಡಿ ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಅದು ಈಗ ಸತ್ಯವಾಗಿದೆ.
ಈ ಬಿಕ್ಕಟ್ಟಿನ ಪರಿಣಾಮವಾಗಿ ದೇಶದ ದೊಡ್ಡ ದೊಡ್ಡ ಕಂಪನಿಗಳ ತ್ರೈಮಾಸಿಕ ಲಾಭಕ್ಕೆ ಭಾರಿ ಪೆಟ್ಟುಕೊಟ್ಟಿದೆ. ಶೇರು ಮಾರುಕಟ್ಟೆಯಲ್ಲಿ ಅವುಗಳ ಬ್ರಾಂಡ್ ಮೌಲ್ಯ ಕುಸಿದಿದೆ.

ಬಿಕ್ಕಟ್ಟು ಇನ್ನಷ್ಟು ಮುಂದುವರಿದರೆ ಆರ್ ಬಿ ಐ ಮಧ್ಯ ಪ್ರವೇಶಿಸಿ ಆರ್ಥಿಕ ನಿಯಮಗಳನ್ನು ಸರಿಪಡಿಸುವುದಾಗಿ ಹೇಳಿದೆ.

ರೂಪಾಯಿ ಮೌಲ್ಯ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದು ಜಿಎಸ್‍ಟಿ ಹಾಗೂ ನೋಟು ಅಮಾನ್ಯವು ಇದಕ್ಕೆ ಮುಖ್ಯ ಕಾರಣ ಎಂದು ಹೇಳಿವೆ.

Leave a Reply

Your email address will not be published. Required fields are marked *

Trending

Exit mobile version