ದಿನದ ಸುದ್ದಿ
ಜಿಎಂ ಮೋಟಾರ್ಸ್ ಸಿಎಫ್ಒ ಸ್ಥಾನಕ್ಕೆ ಭಾರತೀಯ ಮಹಿಳೆ ಆಯ್ಕೆ; ಮೊದಲ ಹಣಕಾಸು ಅಧಿಕಾರಿ
ಅಮೆರಿಕಾದ ಅತಿ ದೊಡ್ಡ ಆಟೋಮೇಕರ್ ಕಂಪನಿ ಜನರಲ್ ಮೋಟಾರ್ಸ್ ನ ಪ್ರತಿಷ್ಠಿತ ಹುದ್ದೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಮೂಲದ ಮಹಿಳೆಯೊಬ್ಬಳ ಆಯ್ಕೆಯಾಗಿದ್ದಾರೆ. ಚೆನ್ನೈ ಮೂಲದ ದಿವ್ಯಾ ಸೂರ್ಯದೇವರ ಜಿಎಂ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಜಗತ್ತಿನ ಯಾವುದೇ ಆಟೋಮೇಕರ್ ಕಂಪನಿ ಮುಖ್ಯ ಹಣಕಾಸು ಅಧಿಕಾರ ಹುದ್ದೆಗೆ ಮಹಿಳೆಯನ್ನು ನೇಮಕ ಮಾಡಿಕೊಂಡಿಲ್ಲ. ಜಿಎಂ ಕಂಪನಿಗೆ ಸಿಇಒ (ಮೇರಿ ಬರ್ರಾ) ಹಾಗೂ ಇಬ್ಬರು ಮಹಿಳೆಯರೇ ಆಗಿದ್ದಾರೆ.
ಇಗಿರುವ ಸಿಎಫ್ಒ ಸ್ಟೀವನ್ಸ್ ಸ್ಥಾನದಿಂದ ತೆರವುಗೊಳ್ಳಲಿದ್ದು, ದಿವ್ಯಾ ಸೆಪ್ಟೆಂಬರ್ ಒಂದರಿಂದ ಅಧಿಕಾರ ವಹಿಕೊಳ್ಳಲಿದ್ದಾರೆ. 2017ರ ಜುಲೈ ವರೆಗೆ ಜಿಎಂ ಉಪಾಧ್ಯಕ್ಷರಾಗಿ (ಕಾರ್ಪೋರೆಟ್ ಹಣಕಾಸು) ಕಾರ್ಯ ನಿರ್ವಹಿಸಿದ್ದರು. ಕಾರ್ಪೊರೇಟ್ ಫೈನಾನ್ಸ್ ಪ್ಲ್ಯಾನಿಂಗ್, ಇನ್ವೆಸ್ಟರ್ ರಿಲೇಷನ್ಸ್ ಮತ್ತಿತರ ಹಣಕಾಸಿನ ಹೊಣೆ ಹೆಗಲಿ ಬೀಳಲಿದೆ.
ಕಂಪನಿ ಬೆಳೆಸುವಲ್ಲಿ ಹಲವಾರು ವರ್ಷಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದಾರೆ. ಕಂಪನಿಯ ಉತ್ಪನ್ನಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಉತ್ತರ ನಿರ್ಧಾರ, ಯೋಜನೆಗಳನ್ನು ರೂಪಿಸಿದ್ದಾರೆ. ಜಪಾನಿನ ಟೆಕ್ನಾಲಜಿ ದೈತ್ಯ ಕಂಪನಿಯಾದ ಸಾಫ್ಟ್ ಬ್ಯಾಂಕ್ ಗ್ರುಪ್ ಕಾರ್ಪ್ $2.25 ಹೂಡಿಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದ ಟ್ರಾನ್ಸ್‌ಪೋರ್ಟೇಷನ್ ಕಂಪನಿಯಾದ “ಲಿಫ್ಟ್”ನಲ್ಲಿ ಬಂಡವಾಳ ಹೂಡಿಕೆ ಮಾಡುವಲ್ಲಿ ದೃಢ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 2013ರಿಂದ 2017 ವರೆಗೆ ಜಿಎಂ ಕಂಪನಿಯ ಸಿಇಒ ಹಾಗೂ ಚೀಫ್ ಇನ್ಸವೆಸ್ಟಮೆಂಟ್ ಅಧಿಕಾರಿಯಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.
ದಿವ್ಯಾ ಅವರು ಮದ್ರಾಸ್ ಯುನಿವರ್ಸಿಟಿಯಲ್ಲಿ ಕಾಮರ್ಸ್ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ 22ನೇ ವಯಸ್ಸಿನಲ್ಲಿ ಅಮೆರಿಕಾಕ್ಕೆ ಹೋದರು. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದರು. ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ಟ್ ಹಾಗೂ ಅಕೌಂಟ್ ನಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. 2005ರಲ್ಲಿ ಡೆಟ್ರಾಯಿಟ್ ನಲ್ಲಿರುವ ಜಿಎಂ ಕಂಪನಿಗೆ ಸೇರಿದರು. ಯುಬಿಸ್ ಮತ್ತು ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಆಗಿ ಕೆಲಸ ಮಾಡಿದ್ದಾರೆ.