ದಿನದ ಸುದ್ದಿ
ದಾವಣಗೆರೆ | ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ ; ವ್ಯಕ್ತಿ ಬಂಧನ : ಫ್ಲೈ ಓವರ್ ಗೆ ಸಾವರ್ಕರ್ ಹೆಸರು ವಿರೋಧಿಸಿದ ಕಾರಣ ಈ ಕೃತ್ಯ
ಸುದ್ದಿದಿನ,ದಾವಣಗೆರೆ: ನಗರದ ಜಿಲ್ಲಾಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಇಂದಿರಾ ಕ್ಯಾಂಟೀನ್ ಆವರಣದಲ್ಲಿರುವ ಇಂದಿರಾಗಾಂಧಿ ಚಿತ್ರಕ್ಕೆ ಶನಿವಾರ ರಾತ್ರಿ ಎಂಜಿನ್ ಆಯಿಲ್ ಬಳಿದು ವಿರೂಪಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅಭಿಮಾನಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
ಈ ಬಗ್ಗೆ ಕೆಟಿಜೆ ನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ನವೀನ್ ಕುಮಾರ್ ದೂರು ದಾಖಲಿಸಿದ್ದರು.
ಭಾರತ್ ಕಾಲೊನಿಯ ನಾಲ್ಕನೇ ಕ್ರಾಸ್ ನಿವಾಸಿ, ಹೋಟೆಲ್ ಕಾರ್ಮಿಕ ಉಮೇಶ್ ಕತ್ತಿ (36) ಬಂಧಿತ ಆರೋಪಿಯಾಗಿದ್ದು, ಫ್ಲೈ ಓವರ್ ಗೆ ಸಾವರ್ಕರ್ ಇಡೋದಕ್ಕೆ ವಿರೋಧಿಸಿದ್ದರಿಂದ ಆತ ಈ ಕೆಲಸ ಮಾಡಿದ್ದಾನೆ ಎಂದರು.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದಲ್ಲಿ ಮತ್ತು ಪೊಲೀಸರ ತನಿಖೆಯ ಆಧಾರದಲ್ಲಿ ಉಮೇಶ್ ಕತ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243