ದಿನದ ಸುದ್ದಿ
ಇಂದಿರಾ ಗಾಂಧಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್ ನಿಧನ
ಸುದ್ದಿದಿನ ಡೆಸ್ಕ್
ಕೇಂದ್ರದ ಮಾಜಿ ಸಚಿವ ಹಾಗೂ ಇಂದಿರಾಗಾಂಧಿ ಆಪ್ತ ಆರ್.ಕೆ. ಧವನ್ (81) ನವ ದೆಹಲಿಯ ಬಿಎಲ್ ಕಪೂರ್ ಆಸ್ಪತ್ರೆಯಲ್ಲಿ ವಯೋಸಹಜ ಸಮಸ್ಯೆಗಳಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆರ್.ಕೆ. ನಿಧನಕ್ಕೆ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದು, ಪಕ್ಷ ಸಂಘಟನೆಗೆ ಅವರ ಅವಿರತ ಶ್ರಮವನ್ನು ನೆನೆದ ಮುಖಂಡರು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಆರ್.ಕೆ. ಧವನ್ ಅವರು ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅನೇಕ ವರ್ಷಗಳ ಕಾಲ ಆಪ್ತ ಕಾರ್ಯದರ್ಶಿರಾಗಿ ಕಾರ್ಯನಿರ್ವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401