ದಿನದ ಸುದ್ದಿ
ಪೆಪ್ಸಿ ಕಂಪನಿಯಿಂದ ಇಂದಿರಾ ನೋಯಿ ನಿರ್ಗಮನ
೧೨ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಭಾರತದ ಮಹಿಳೆ
ಸುದ್ದಿದಿನ ಡೆಸ್ಕ್: ಭಾರತ ಮೂಲದ ಇಂದಿರಾ ನೋಯಿ ಅಮೆರಿಕದ ದೈತ್ಯ ಆಹಾರ ಉತ್ಪನ್ನಗಳ ತಯಾರಕ ಪೆಪ್ಸಿಕೋ ಕಂಪನಿ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಹುದ್ದೆಯಿಂದ 12 ವರ್ಷಗಳ ನಂತರ ನಿರ್ಗಮನಗೊಳ್ಳಲಿದ್ದಾರೆ. 62 ವರ್ಷದ ಇಂದಿರಾ ನೋಯಿ ಅಕ್ಟೋಬರ್ 3ರಂದು ಕಂಪನಿ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಕಂಪನಿಯೊಂದಿಗಿನ 24 ಸಂಬಂಧ ಅಂತ್ಯವಾಗಲಿದೆ. ಆದರೆ, 2019ರ ವರೆಗೆ ಚೇರ್ಮನ್ ಆಗಿ ಮುಂದುವರಿಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ನೋಯಿ ನಿರ್ಗಮನದಿಂದ ತೆರವಾದ ಸಿಇಒ ಹುದ್ದೆಗೆ ಬಾರ್ಸಿಲೋನಾ ಮೂಲದ ಅಧ್ಯಕ್ಷ ರಾಮನ್ ಲಗುವರ್ಟಾ ಅವರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದ್ದು, ನೋಯಿ ನಂತರದಲ್ಲಿ ಕಂಪನಿಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲ ಸಾಮರ್ಥ್ಯ, ದಕ್ಷತೆ ಲಗುವರ್ಟಾ ಅವರಿಗಿದೆ ಎಂದು ಆಡಳಿತ ನಿರ್ಧರಿಸಿದೆ. ಇಂದಿರಾ ನೋಯಿ ನಿರ್ಗಮನ ಹೊರತುಪಡಿಸಿ ಕಂಪನಿ ನಾಯಕರ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.