ದಿನದ ಸುದ್ದಿ

ಕೆಲಸ ಖಾಲಿ‌ಇದೆ | ದಾವಣಗೆರೆಯಲ್ಲಿ ಮೇ.20 ರಂದು INDUSIND BANK ನಿಂದ ವಾಕ್ ಇನ್ ಇಂಟವ್ರ್ಯೂವ್

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ಇವರ ವತಿಯಿಂದ ಮೇ.20 ರಂದು ಬೆಳಗ್ಗೆ 10 ಗಂಟೆಗೆ “ವಾಕ್ ಇನ್ ಇಂಟವ್ರ್ಯೂವ್” ಆಯೋಜಿಸಲಾಗಿದೆ.

ವಾಕ್ ಇನ್ ಇಂಟವ್ರ್ಯೂವ್‍ನಲ್ಲಿ ಖಾಸಗಿ ಬ್ಯಾಂಕ್ INDUSIND BANK ಸಂಸ್ಥೆ ಬೆಂಗಳೂರು ಇವರು ಭಾಗವಹಿಸುತ್ತಿದ್ದು, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಮೇ.20ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್‍ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ ದಾವಣಗೆರೆ ಇಲ್ಲಿ ಭಾಗವಹಿಸಿ ವಾಕ್ ಇನ್ ಇಂಟವ್ರ್ಯೂವ್‍ನ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 08192-259446, 6361550016, 7406323294ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಗಿರೀಶ್ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version