ದಿನದ ಸುದ್ದಿ

ಹುಷಾರ್ : ಸಿಲಿಕಾನ್ ಸಿಟಿಯಲ್ಲಿ ‘ಇನ್ನೋವಾ ಕಾರ್ ಕಳ್ಳರ ಹಾವಳಿ’..!

Published

on

ಸುದ್ದಿದಿನ, ಬೆಂಗಳೂರು : ನಿಮ್ಮ ಬಳಿಯೂ ಇನ್ನೋವಾ ಕಾರ್ ಇದೆಯಾ…? ರಾತ್ರಿ ಹೊತ್ತು ನೀವು ನಿಮ್ಮ ಕಾರನ್ನ ಮನೆ ಮುಂದೆ ನಿಲ್ಲಿಸ್ತೀರಾ…? ಹಾಗಾದ್ರೆ ಈ ಸ್ಟೋರಿ ಓದಿ. ಸಿಲಿಕಾನ್ ಸಿಟಿಯಲ್ಲಿ ಇನ್ನೋವಾ ಕಾರಿನ ಮೇಲೆ ಕಣ್ಣಿಟ್ಟಿದ್ದಾರೆ ಖದೀಮರು. ಒಂದೇ ವಾರದಲ್ಲಿ 4 ಇನ್ನೊವಾ ಕಾರಿನ ಏರ್ ಬ್ಯಾಗ್ಸ್, ರಿಮೋಟ್ ಸೆನ್ಸಾರ್ ಸೆಟ್ ಕಳ್ಳತನ ಮಾಡಿದ್ದಾರೆ.

ಬೆಂಗಳೂರಿನ ಬ್ಯಾಟರಾಯನಪುರ, ಪ್ರಮೋದ್ ಲೇಔಟ್, ಗಿರಿನಗರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಮನೆ ಮುಂದೆ ನಿಲ್ಲಿಸಿದ ಇನ್ನೋವಾ ಕಾರುಗಳನ್ನೇ ಟಾರ್ಗೆಟ್ ಮಾಡುತ್ತಿರುವ ಕಳ್ಳರು ಇನ್ನೋವಾ ಕಾರಿನ ಬಿಡಿಭಾಗಗಳಿಗೆ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ ಕಳ್ಳತನ ಶುರುಮಾಡಿದ್ದಾರೆ.

ಕದ್ದ ಮಾಲನ್ನು ಜೆ.ಸಿ ರಸ್ತೆಯಲ್ಲಿ ತಂದು ಮಾರಾಟ ಮಾಡಿರುವ ಶಂಕೆವ್ಯಕ್ತವಾಗಿದ್ದು,ಸೋಮಶೇಖರ್, ರಾಜೇಶ್ ಹೆಗಡೆ, ಸುಕುಮಾರ್ ಎಂಬುವವರಿಗೆ ಸೇರಿದ ವಾಹನಗಳಾಗಿವೆ. ರಾತ್ರಿ ಮನೆಯೆದುರು ಕಾರು ನಿಲ್ಲಿಸಿ ಬೆಳಿಗ್ಗೆ ನೋಡುವ ಹೊತ್ತಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.ಇನ್ನೋವಾ ಕಾರುಗಳ ಎಡಭಾಗದ ಕಿಟಕಿ ಗಾಜು ಒಡೆದು ಕೈಚಳಕ ತೋರಿಸಿರುವ ಖದೀಮರು ಲಕ್ಷಾಂತರ ರೂ ಬೆಲೆ ಬಾಳುವ ಇನ್ನೋವಾ ಏರ್ ಬ್ಯಾಗ್ಸ್, ಕ್ರ್ಯೂಸ್ ಕಂಟ್ರೋಲ್ ಮತ್ತು ರಿಮೋಟ್ ಸೆನ್ಸಾರ್ ಕಿಟ್ ಕದ್ದಿದ್ದಾರೆ.

ಪೊಲೀಸರಿಂದ ಘಟನೆ ನಡೆದ ಸುತ್ತ -ಮುತ್ತ ಬಡಾವಣೆಯ ಸಿಸಿಟಿವಿಯ ಪರಿಶೀಲನೆ ನಡಿದಿದ್ದು, ಒಂದೇ ಗುಂಪಿನ ಖದೀಮರಿಂದ ಕೃತ್ಯ ಶಂಕೆವ್ಯಕ್ತವಾಗಿದೆ.ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿ ನಗರ, ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version