ಕ್ರೀಡೆ

ಅಂತರಾಷ್ಟ್ರೀಯ ಕಬಡ್ಡಿ ಲೀಗ್ ಆಟಗಾರರ ಆಯ್ಕೆ ಪ್ರಕ್ರಿಯೆ

Published

on

ಸುದ್ದಿದಿನ, ಬೆಂಗಳೂರು: ಪ್ರೊ ಕಬಡ್ಡಿಗೆ ಪರ‌್ಯಾಯವಾಗಿ ರೂಪುಗೊಂಡಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ನ ಆಲ್ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸೇರಿದಂತೆ ಎಲ್ಲಾ ಇತರ ಜಿಲ್ಲೆಗಳಿಂದಲೂ ಆಟಗಾರರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಸರ್ಕಾರಿ ಇಲಾಖೆಗಳ ಆಟಗಾರರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

ಇಲ್ಲಿನ ವಿದ್ಯಾನಗರ ಕ್ರೀಡಾ ಹಾಸ್ಟೆಲ್ ಆವರಣದಲ್ಲಿ ಬುಧವಾರ ನಡೆದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 300 ಆಟಗಾರರು ಭಾಗವಹಿಸಿದ್ದರು. ಒಟ್ಟಾರೆ 200 ಆಟಗಾರರನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ 150 ಆಟಗಾರರು ಲೀಗ್‌ನಲ್ಲಿನ 8 ತಂಡಗಳಲ್ಲಿ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ 50 ಯುವ ಆಟಗಾರರಿಗೆ ಹೆಚ್ಚಿನ ತರಬೇತಿಯನ್ನು ನೀಡಲು ನ್ಯೂ ಕಬಡ್ಡಿ ಫೆಡರೇಷನ್ ನಿರ್ಧರಿಸಿದೆ.

ಆಟಗಾರರ ಆಯ್ಕೆಯನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.  ‘ಎ’. ‘ಬಿ’ ಹಾಗೂ ‘ಸಿ’ ಎಂದು ೩ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ವಿಭಾಗಗಳಲ್ಲಿ ಆಯ್ಕೆಯಾದ ಆಟಗಾರರಿಗೆ ಕ್ರಮವಾಗಿ 10.8ಲಕ್ಷ ಹಾಗೂ 6ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇನ್ನೂ 50 ಯುವ ಆಟಗಾರರಿಗೆ 4.3 ಲಕ್ಷಹಾಗೂ 2 ಲಕ್ಷ ರು.ಗಳನ್ನು ನೀಡಲಾಗುತ್ತಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ನ ಕಾರ‌್ಯದರ್ಶಿ ಪ್ರಸಾದ್ ಬಾಬು ಹೇಳಿದ್ದಾರೆ.

12 ಆಯ್ಕೆಗಾರರು

ಆಟಗಾರರ ಆಯ್ಕೆ ಸಮಿತಿಯಲ್ಲಿ 12 ಮಾಜಿ ಅಂತಾರಾಷ್ಟ್ರೀಯ ಆಟಗಾರರು ಹಾಗೂ ಅರ್ಜುನ ಪ್ರಶಸ್ತಿ ವಿಜೇತರು ಇದ್ದಾರೆ. ಆಯ್ಕೆ ಪಾರದರ್ಶಕ ವಾಗಿರಲೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆ ತಜ್ಞ ಕಬಡ್ಡಿ ಆಟಗಾರರ ಸಮ್ಮುಖದಲ್ಲಿ ಆಯ್ಕೆ ನಡೆಸಲಾಗುತ್ತಿದೆ.

18 ಪ್ರೊ ಕಬಡ್ಡಿ ಆಟಗಾರರು?

ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ರಾಜ್ಯಗಳಿಂದ 18 ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕರ್ನಾಟಕ ರಾಜ್ಯದಿಂದ ಯಾವೊಬ್ಬ ಪ್ರೊ ಕಬಡ್ಡಿ ಆಟಗಾರರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ರೈಲ್ವೇಸ್, ಪೊಲೀಸ್, ಆರ್ಮಿ ಇಲಾಖೆಯ ಕಬಡ್ಡಿ ಆಟಗಾರರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಜ್ಯದಿಂದ 30 ಆಟಗಾರರು

ಕರ್ನಾಟಕ ರಾಜ್ಯದಿಂದ 30ಕ್ಕೂ ಹೆಚ್ಚು ಆಟಗಾರರು ಆಲ್ ಇಂಡಿಯಾ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಮೊದಲೇ ಹೇಳಿದಂತೆ ಪ್ರತಿ ತಂಡವೊಂದರಲ್ಲಿ 5 ರಿಂದ 6 ಆಟಗಾರರು ರಾಜ್ಯದವರಾಗಿರುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ 8 ತಂಡಗಳ 18ಆಟಗಾರರ ಪೈಕಿ ಕರ್ನಾಟಕವರು 6 ಆಟಗಾರರು ಇರಲಿದ್ದಾರೆ.

3 ದಿನಗಳ ಪ್ರಕ್ರಿಯೆ

ಪ್ರೊ ಕಬಡ್ಡಿಗೆ ಪರ‌್ಯಾಯವಾಗಿ ರೂಪುಗೊಂಡಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ 3 ದಿನಗಳ ಕಾಲ ನಡೆಯುತ್ತಿದೆ. ಮಂಗಳವಾರ ಹಾಗೂ ಬುಧವಾರ ಆಟಗಾರರ ನೋಂದಾಣಿ ಕಾರ್ಯ ನಡೆಯಿತು. ಗುರುವಾರ ಆಟಗಾರರ ಅಂತಿಮ ಆಯ್ಕೆ ನಡೆಯಲಿದೆ. ಜೊತೆಯಲ್ಲಿ ಪ್ರಾಂಚೈಸಿಗಳನ್ನು ಅಂತಿಮಗೊಳಿಸಲಾಗುತ್ತದೆ. ಪ್ರತಿ ತಂಡವು 18 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದೆ.

ಪ್ರಕ್ರಿಯೆಯಲ್ಲಿ 100 ರೆಫ್ರಿಗಳು

ಸುಮಾರು 100 ಮಂದಿ ರೆಫ್ರಿಗಳು ಪಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 27 ರೆಫ್ರಿಗಳು ಕರ್ನಾಟಕದವರಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986815401

Trending

Exit mobile version