ರಾಜಕೀಯ

ಚುನಾವಣೆ ಹಿನ್ನೆಲೆಯಲ್ಲಿ ಇಂಟರ್ ನೆಟ್ ಬಂದ್

Published

on

ಸುದ್ದಿದಿನ ಡೆಸ್ಕ್: ಜಮ್ಮುಕಾಶ್ಮೀರದಲ್ಲಿ ಇಂದಿನಿಂದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆರಂಭವಾಗಿವೆ. ಈ ಹಿನ್ನೆಲೆ ಮೊಬೈಲ್ ಇಂಟರ್ ನೆಟ್ ಸೌಲಭ್ಯವನ್ನು ದಕ್ಷಿಣ ಕಾಶ್ಮೀರ ಭಾಗದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇನ್ನು ಕಾಶ್ಮೀರದ ಉಳಿದ ಭಾಗಗಳಲ್ಲಿ ಮೊಬೈಲ್ ಇಂಟರ್ ನೆಟ್ ಸ್ಪೀಡ್ ಅನ್ನು 2ಜಿಗೆ ಇಳಿಸಲಾಗಿದೆ. ರಾಜ್ಯದ ಅನಂತನಾಗ್, ಬುದ್ಗಾಮ್, ಬಂಡಿಪೋರ್, ಬಾರಾಮುಲ್ಲಾ, ಜಮ್ಮು, ಕಾರ್ಗಿಲ್, ಕುಪ್ವಾರಾ, ಲೇಹ್, ಪೂಂಚ್, ರಾಜೌರಿ ಹಾಗೂ ಶ್ರೀನಗರ್ ಗಳಲ್ಲಿ ಮತದಾನ ಆರಂಭಗೊಂಡಿವೆ.

ಮೊದಲ ಹಂತದಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 11 ಜಿಲ್ಲೆಗಳಲ್ಲಿರುವ ಒಟ್ಟು 422 ವಾರ್ಡ್ ಗಳಲ್ಲಿ ಮತದಾನ ಆರಂಭಗೊಂಡಿದ್ದು ಮುಂದಿನ ಹಂತದಲ್ಲಿ ಉಳಿದ ವಾರ್ಡ್ ಗಳಲ್ಲಿ ಕೂಡಾ ಮತದಾನ ನಡೆಯಲಿದೆ.

Trending

Exit mobile version