ದಿನದ ಸುದ್ದಿ

ಭವಿಷ್ಯಕ್ಕಾಗಿ ಹೂಡಿಕೆಯ ಜ್ಞಾನ ಅವಶ್ಯಕ

Published

on

ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆಯ ನಿರ್ಣಯ ಶಾಸ್ತ್ರ ವಿಭಾಗದ ವತಿಯಿಂದ ನಿರ್ಣಯ ಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಹೂಡಿಕೆ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೂಡಿಕೆ ತಜ್ಞರಾದ ಎಂಜಲ್ ವನ್ನ ಆದಿತ್ಯ ಮತ್ತು ಅಶೋಕ್ ರಾಯಭಾಗಿ ಅವರು ವಿದ್ಯಾರ್ಥಿಗಳಿಗೆ ಹೂಡಿಕೆ ವಿಷಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮುಖ್ಯಸ್ಥರಾದ ವೆಂಕಟೇಶ್ ಬಾಬು ಎಸ್. ಅವರು ವಿದ್ಯಾರ್ಥಿಗಳಿಗೆ ಹೂಡಿಕೆಯ ಮಹತ್ವ ಮತ್ತು ಅದರ ಪ್ರಾಯೋಗಿಕ ಅಂಶಗಳ ಕುರಿತು ವಿವರಿಸಿದರು. ಅವರು ಹೂಡಿಕೆ ಹೇಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದು ಮತ್ತು ಹೇಗೆ ಸ್ಮಾರ್ಟ್ ಹೂಡಿಕೆಗೆ ಮೊದಲ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಉದಾಹರಣೆಗಳ ಮೂಲಕ ವಿವರಿಸಿದರು.

ಎಂಜಲ್ ವನ್ನ ಆದಿತ್ಯ ಅವರು ಹೂಡಿಕೆಯ ವಿವಿಧ ಪ್ರಕಾರಗಳು, ಅದರ ಲಾಭ-ನಷ್ಟಗಳು ಮತ್ತು ಸರಿಯಾದ ಹೂಡಿಕೆ ತಂತ್ರಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಅವರು ನೈಜ ಜಗತ್ತಿನ ಉದಾಹರಣೆಗಳನ್ನು ನೀಡಿ, ಹೂಡಿಕೆಯಲ್ಲಿ ತಿಳಿವಳಿಕೆಯಿಂದ ನಿರ್ಧಾರ ಕೈಗೊಳ್ಳುವ ತಂತ್ರಗಳನ್ನು ವಿವರಿಸಿದರು.

ಅಶೋಕ್ ರಾಯಭಾಗಿ ಅವರು ಹೂಡಿಕೆ ಕ್ಷೇತ್ರದಲ್ಲಿ ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳು ಮತ್ತು ಅವುಗಳನ್ನು ತಪ್ಪಿಸುವ ವಿಧಾನಗಳ ಬಗ್ಗೆ ಮಾತನಾಡಿದರು. ಇಂದಿನ ಹೂಡಿಕೆ ಪ್ರವೃತ್ತಿಗಳು ಮತ್ತು ಮಾರುಕಟ್ಟೆಯ ಬದಲಾವಣೆಗಳ ಬಗ್ಗೆ ವಿವರಿಸುವ ಮೂಲಕ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡಿದರು.

ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಭವಿಷ್ಯದ ಹಣಕಾಸು ನಿರ್ವಹಣೆಗೆ ಹಿತಕರ ಮಾಹಿತಿ ನೀಡಿದ್ದು, ಅವರು ಹೂಡಿಕೆ ಜಗತ್ತಿನಲ್ಲಿ ತಮ್ಮ ಮೊದಲ ಹೆಜ್ಜೆ ಇಡುವ ನೈಪುಣ್ಯವನ್ನು ಸಂಪಾದಿಸಲು ಪ್ರೇರೇಪಿಸಲಾಯಿತು. ಕಾರ್ಯಗಾರದಲ್ಲಿ ವಿಭಾಗದ ಎಲ್ಲಾ ಅಧ್ಯಾಪಕರೂ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version