ಕ್ರೀಡೆ
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಐವರ ಬಂಧನ, ನಗದು, ಮೊಬೈಲ್ ವಶ
ಸುದ್ದಿದಿನ,ಗದಗ : ನಗರದ ರಿಂಗ್ ರಸ್ತೆ ಬಾಲಾಜಿ ನಗರ ಕ್ರಾಸ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದ ಐವರನ್ನು ಸೆ.30 ರಂದು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.55 ಲಕ್ಷ ರೂ. ನಗದು ಹಾಗೂ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಲಾಜಿ ನಗರದ ಶ್ರೀನಿವಾಸ ವಿಶ್ವನಾಥಸಾ ಹಬೀಬ, ಕೇಶವ ನಗರದ ಅಲ್ತಾಫ್ ಮಾಬುಸಾಬ ತಹಶೀಲ್ದಾರ, ಕಿಲ್ಲಾ ಓಣಿಯ ಸಾಗರ ನಾರಾಯಣಸಾ ಪವಾರ, ದಾಸರ ಓಣಿಯ ವಿನಾಯಕ ಭೀಮಸೇನಸಾ ಶಿದ್ಲಿಂಗ್, ಒಕ್ಕಲಗೇರಿ ಓಣಿಯ ಪ್ರಕಾಶ ಲಕ್ಷö್ಮಣಸಾ ಬದಿ ಬಂಧಿತ ಆರೋಪಿಗಳು.
ಬಂಧಿತರು ಸೆ.30 ರಂದು ಸಂಜೆ ನಡೆದ ರಾಜಸ್ತಾನ ರಾಯಲ್ಸ್ ಹಾಗೂ ಕೆಕೆಆರ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಸ್ಕೋರ್ ಮತ್ತು ಫಲಿತಾಂಶದ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಡಿಎಸ್‌ಪಿ ಪ್ರಲ್ಹಾದ ಎಸ್.ಕೆ. ಮಾರ್ಗದರ್ಶನದಲ್ಲಿ ಗದಗ ಶಹರ ಸಿಪಿಐ ಪಿ.ವ್ಹಿ.ಸಾಲಿಮಠ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ, ಸಿಬ್ಬಂದಿಗಳ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ
ದಲಿತ ಯುವತಿ ಅತ್ಯಾಚಾರ-ಕೊಲೆ | ಹೊಳಲ್ಕೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ
https://suddidina.com/daily-news/protest-in-holalkere/
ಸುದ್ದಿದಿನ.ಕಾಂ|ವಾಟ್ಸಾಪ್|9980346243