ಕ್ರೀಡೆ
ಐಪಿಎಲ್ ಸುದ್ದಿ
ಸುದ್ದಿದಿನ ಡೆಸ್ಕ್ : ನಿನ್ನೆ ರಾತ್ರಿ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 11ರನ್‌ಗಳಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20ಓವರ್‌ಗಳಲ್ಲಿ 4ವಿಕೆಟ್ ನಷ್ಟಕ್ಕೆ 187ರನ್ ಗಳಿಸಿತು. ಶಿಖರ್ ಧವನ್ ಅಜೇಯ88 ರನ್ ಗಳಿಸಿದರೆ, ಭಾನುಕಾ ರಾಜಪಕೆ 42ರನ್ ಗಳಿಸಿದರು. ಚೆನ್ನೈನ ದ್ವೈನ್ ಬ್ರೇವೋ ಎರಡು ವಿಕೆಟ್ ಪಡೆದರು.
ಪಂಜಾಬ್ ನೀಡಿದ ಮೊತ್ತದ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176ರನ್‌ಗಳಿಸಿಸಲಷ್ಟೇ ಶಕ್ತವಾಯಿತು. ಅಂಬಟಿ ರಾಯುಡು 78 ರನ್ ಗಳಿಸಿದರು. ಪಂಜಾಬ್ ಪರ ರಬಾಡ ಹಾಗೂ ರಿಷಿ ಧವನ್ ತಲಾ ಎರಡು ವಿಕೆಟ್ ಕಬಳಿಸಿದರು.
ಐಪಿಎಲ್ ಇತಿಹಾಸದಲ್ಲಿ ವಿರಾಟ್‌ಕೊಹ್ಲಿ ನಂತರ 6ಸಾವಿರ ರನ್‌ಗಳಿಸಿದ ಕೀರ್ತಿಗೆ ಶಿಖರ್ ಧವನ್ ಭಾಜನರಾದರು.
ಇಂದು ಪುಣೆಯ ಎಮ್‌ಸಿಎ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪ್ರಾರಂಭವಾಗುವ ಪಂದ್ಯದಲ್ಲಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ಹಣಾಹಣಿ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243