ಕ್ರೀಡೆ

ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿ ಬಿ ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

Published

on

ಸುದ್ದಿದಿನ,ಅಬುಧಾಬಿ: 2020 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗ 3ನೇ ಭರ್ಜರಿ ಗೆಲುವು ಸಾಧಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್‍ಗಳ ಭರ್ಜರಿ ಗೆಲುವು ಪಡೆದಿದ್ದು, ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6 ಪಾಯಿಂಟ್ ಗಳಿಸಿ ಮೊದಲ‌ ಸ್ಥಾನಕ್ಕೆ ಏರಿದೆ.

ಪಡಿಕ್ಕಲ್ (63 ರನ್), ವಿರಾಟ್ ಕೊಹ್ಲಿ (72 ರನ್) ಅರ್ಧ ಶತಕದ ನೆರವಿನಿಂದ 155 ರನ್‍ಗಳ ಗುರಿಯನ್ನು 5 ಎಸೆತ ಬಾಕಿ ಇರುವಂತೆಯೇ ಆರ್‌ಸಿಬಿ ಗುರಿ ಮುಟ್ಟಿತು. 19.1 ಓವರ್ ನಲ್ಲಿ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version