ಕ್ರೀಡೆ
ಐಪಿಎಲ್ ಸುದ್ದಿ
ಸುದ್ದಿದಿನ ಡೆಸ್ಕ್ : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ 36 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.
169ರನ್ ಗುರಿ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆಯತ್ತಾದರೂ ನಂತರ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 20 ಓವರ್ ಗಳಲ್ಲಿ 8ವಿಕೆಟ್‌ಗೆ 132ರನ್ ಗಳಿಗೆ ಕುಸಿತಗೊಂಡಿತು.
ಮುಂಬಯಿ ಇಂಡಿಯನ್ಸ್ ಪರ ರೋಹಿತ್ ಶರ್ಮ ಗರಿಷ್ಠ 39ರನ್ ಗಳಿಸಿದರು. ಲಖನೌ ಸೂಪರ್ ಜಯಂಟ್ಸ್ ಪರ ಕೃಣಾಲ್ ಪಾಂಡ್ಯ ಮೂರು ವಿಕೆಟ್ ಉರುಳಿಸಿದರೆ, ಮೊಹ್ಸಿನ್ ಖಾನ್, ಜೇಸನ್ ಹೋಲ್ಡರ್, ರವಿ ಬಿಷ್ಣೋಯಿ ಮತ್ತು ಆಯುಷ್ ಬದೋನಿ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಲಖನೌ ಪರ ಇನಿಂಗ್ಸ್ ಆರಂಭಿಸಿದ ರಾಹುಲ್, ಹಾಲಿ ಋತುವಿನಲ್ಲಿ ಎರಡನೇ ಶತಕ ದಾಖಲಿಸಿದ ಪರಿಣಾಮ ಲಖನೌ ತಂಡ 6ವಿಕೆಟ್ ಗೆ 168 ರನ್ ಗಳಿಸಲು ಶಕ್ತಗೊಂಡಿತು. ಅಜೇಯ 103 ರನ್ ಗಳಿಸಿದ ರಾಹುಲ್ ಸಹಜವಾಗಿಯೇ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಒಟ್ಟಾರೆ ಐಪಿಎಲ್ ನಲ್ಲಿ ೪ನೇ ಶತಕ ಬಾರಿಸಿದ ನಾಯಕ ಕೆ.ಎಲ್. ರಾಹುಲ್, ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ ಗಳಿಸಿದ ರೋಹಿತ್ ಶರ್ಮ ಅವರ ದಾಖಲೆಯನ್ನು ಸರಿಗಟ್ಟಿದರು. ಇಬ್ಬರು ತಲಾ ಆರು ಶತಕ ಗಳಿಸಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7.30ಕ್ಕೆಆರಂಭವಾಗಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243