ಕ್ರೀಡೆ

ಐಪಿಎಲ್ ಸುದ್ದಿ

Published

on

ಸುದ್ದಿದಿನ ಡೆಸ್ಕ್ : ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿನ್ನೆ ರಾತ್ರಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್‍ಸ್ ಬೆಂಗಳೂರು ತಂಡವನ್ನು 29 ರನ್‌ಗಳಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಕಲೆ ಹಾಕಿತು. ರಿಯಾನ್ ಪರಾಗ್ 54 ರನ್ ಗಳಿಸಿದರೆ, ನಾಯಕ ಸಂಜು ಸಾಮ್ಸನ್ 27 ರನ್ ಗಳಿಸಿದರು.

145 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್‍ಸ್ ಬೆಂಗಳೂರು ತಂಡ 19.3 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 115 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಜೋಷ್ ಹ್ಯಾಜಲ್‌ವುಡ್, ವನಿಂದು ಹರಸಂಗ್ ತಲಾ 2ವಿಕೆಟ್, ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.

ರಾಜಸ್ಥಾನ ರಾಯಲ್ಸ್ ಪರ ಬ್ಯಾಟಿಂಗ್ ಅರ್ಧಶತಕ ಬಾರಿಸಿ ನಂತರ ಫೀಲ್ಡಿಂಗ್‌ನಲ್ಲಿ ಉತ್ತಮ ಕ್ಯಾಚ್‌ಗಳನ್ನು ಹಿಡಿದ ರಿಯಾನ್ ಪರಾಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂದು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಹೈದ್ರಾಬಾದ್ ಸನ್‌ರೈಸರ್ಸ್ ಮುಖಾಮುಖಿಯಾಗಲಿವೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version