ಕ್ರೀಡೆ
ಐಪಿಎಲ್ ಸುದ್ದಿ : ಇಂದಿನ ಪಂದ್ಯ
ಸುದ್ದಿದಿನ ಡೆಸ್ಕ್ : ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ನ ಅಜೇಯ ಅರ್ಧಶತಕ ಮತ್ತು ರಶೀದ್ ಖಾನ್ ಅವರ ವೇಗದ ಆಟದಿಂದಾಗಿ ಗುಜರಾತ್ ಟೈಟಾನ್ಸ್, ಚೆನೈ ಸೂಪರ್ ಕಿಂಗ್ಸ್ ಅನ್ನು 3 ವಿಕೆಟ್ಗಳಿಂದ ಮಣಿಸಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಚೆನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ169 ರನ್ಗಳಿಸಿತು. 170ರನ್ಗಳ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 7ವಿಕೆಟ್ ನಷ್ಟಕ್ಕೆ ,ಡೇವಿಡ್ ಮಿಲ್ಲರ್ ಅವರ ಅಜೇಯ ೯೪ರನ್ ಹಾಗೂ ರಶಿದ್ ಖಾನ್ ಅವರ ವೇಗದ 40 ರನ್ಗಳ ಸಹಾಯದಿಂದ 3 ವಿಕೆಟ್ಗಳಿಂದ ಜಯಗಳಿಸಿದೆ.
ಡೇವಿಡ್ ಮಿಲ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗುಜರಾತ್ ಆರು ಪಂದ್ಯಗಳಲ್ಲಿ 5 ಪಂದ್ಯದಲ್ಲಿ ಜಯಗಳಿಸಿದ್ದರೆ, ಚೆನೈ ಸೂಪರ್ ಕಿಂಗ್ಸ್ ಆರು ಪಂದ್ಯಗಳಲ್ಲಿ ಐದು ಬಾರಿ ಸೋತಿದೆ. ಐಪಿಎಲ್ನ ಅಂಕ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದೆ. ಚೆನೈ ಸೂಪರ್ ಕಿಂಗ್ಸ್ ತಂಡ ಯಾವುದೇ ಪಂದ್ಯ ಗೆದ್ದಿರದ ಮುಂಬೈ ಇಂಡಿಯನ್ಸ್ ತಂಡದ ಒಂದು ಸ್ಥಾನ ಮೇಲಿದೆ.
ಮುಂಬೈನ ಡಿ ವೈ ಪಾಟಿಲ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ವಿರುದ್ಧ ಗೆಲುವು ಸಾಧಿಸಿದೆ.
ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾ ಮುಖಿಯಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243