ಕ್ರೀಡೆ
ಐಪಿಎಲ್ ಟಿ-20 ಕ್ರಿಕೆಟ್ ; ಇಂದು ಸಂಜೆ ರಾಯಲ್ ಚಾಲೆಂಜರ್‍ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿ
ಸುದ್ದಿದಿನ ಡೆಸ್ಕ್ : ಮುಂಬೈನ ಡಾ. ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್‍ಸ್ ತಂಡವನ್ನು 2 ರನ್‌ಗಳಿಂದ ಸೋಲಿಸಿ ರೋಚಕ ಗೆಲುವು ಸಾಧಿಸಿದೆ.
ಈ ಸೋಲಿನಿಂದಾಗಿ ಕೋಲ್ಕತ್ತಾ ನೈಟ್ ರೈಡರ್‍ಸ್ ಪ್ಲೆ ಆಫ್ ಕನಸು ಕಮರಿದಂತಾಗಿದೆ. 18 ಅಂಕಗಳೊಂದಿಗೆ ಲಖನೌ ಸೂಪರ್ ಜೈಂಟ್ಸ್ ತಂಡ 2 ನೇ ಸ್ಥಾನಕ್ಕೇರಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತಂಡದ ಆರಂಭಿಕ ಜೋಡಿ ನಿಗದಿತ 20 ಓವರ್‌ಗಳಲ್ಲಿ 210 ರನ್ ಗಳಿಸಿ ಅಜೇಯರಾಗಿ ಉಳಿದ ಹಿನ್ನೆಲೆಯಲ್ಲಿ ಹಲವು ದಾಖಲೆಗಳನ್ನು ಮುರಿದರು.
ಕ್ವಿಂಟನ್ 140 ರನ್ ಗಳಿಸಿ ಅಜೇಯರಾಗುಳಿದರೆ ಕೆ ಎಲ್ ರಾಹುಲ್ 68 ರನ್‌ಗಳ ಕೊಡುಗೆ ನೀಡಿದರು. 210 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್‍ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಇಂದು ರಾಯಲ್ ಚಾಲೆಂಜರ್‍ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243