ಕ್ರೀಡೆ
ಐಪಿಎಲ್ ಟಿ20 ಸುದ್ದಿ
ಐಪಿಎಲ್ ಟಿ20 ಸುದ್ದಿ
ಸುದ್ದಿದಿನ ಡೆಸ್ಕ್ : ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ 60 ಮತ್ತು ಪೃಥ್ವಿ ಶಾ 41 ಅವರ 83ರನ್ ಗಳ ಆರಂಭಿಕ ಜತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 9ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ.
ಪಂಜಾಬ್ ತಂಡ ಒಡ್ಡಿದ 116 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ 10.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119ರನ್ ಗಳಿಸಿತು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ, ನಿಗದಿತ 20ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ನಷ್ಟಕ್ಕೆ 115ರನ್ ಗಳಿಸಿತು. ಜಿತೇಶ್ ಶರ್ಮ ತಂಡದ ಪರ ಗರಿಷ್ಠ 32 ರನ್ ಗಳಿಸಿದರು.
ಡೆಲ್ಲಿ ತಂಡದ ಖಲೀಲ್ ಅಹ್ಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಉರುಳಿಸಿದರು. ಈ ಮಧ್ಯೆ, ಮುಸ್ತಾಫಿಜುರ್ ರಹ್ಮಾನ್ 1 ವಿಕೆಟ್ ತಮ್ಮದಾಗಿಸಿಕೊಂಡರು.ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಆರು ಪಂದ್ಯಗಳಲ್ಲಿ ಡೆಲ್ಲಿ ಮೂರನೇ ಜಯ ಗಳಿಸಿದರೆ, ಪಂಜಾಬ್ ಆಡಿದ 7ಪಂದ್ಯಗಳಲ್ಲಿ 4ನೇ ಸೋಲಿಗೆ ಒಳಗಾಯಿತು. ಇಂದು ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ರಾತ್ರಿ7.30 ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243