ದಿನದ ಸುದ್ದಿ

ಕೊರೊನಾವೈರಸ್ ಮಹಾಮಾರಿ : ಇರಾನ್ ದಿಗ್ಬಂಧನ ತೆಗೆಯಲು ಆಗ್ರಹ

Published

on

ರಾನ್ ಕೊರೊನಾವೈರಸ್ ಮಹಾಮಾರಿಯಿಂದ ಮೂರನೇ ಅತಿ ಹೆಚ್ಚು ಪೀಡಿತವಾದ ದೇಶವಾಗಿದ್ದು, ಅದರ ವಿರುದ್ಧ ಕ್ರಮಕೈಗೊಳ್ಳಲು ಅನುವಾಗುವಂತೆ ಅಮೆರಿಕ ಅದರ ಮೇಲೆ ವಿಧಿಸಿರುವ ಕಟುವಾದ ಆರ್ಥಿಕ ದಿಗ್ಬಂಧನದ ಕ್ರಮಗಳನ್ನು ಹಿಂತೆಗೆಯಬೇಕೆಂದು ಹಲವು ವಿಭಾಗಗಳಿಂದ ಆಗ್ರಹಪೂರ್ವಕ ಕರೆ ನೀಡಲಾಗುತ್ತಿದೆ. ಇರಾನ್ ನಲ್ಲಿ ಕೊರೊನಾವೈರಸ್ ಸೋಂಕು ತಗಲಿದವರ ಸಂಖ್ಯೆ (ಮಾ. 17ರ ಹೊತ್ತಿಗೆ) 16 ಸಾವಿರದಾಟಿದ್ದು ಸಾವುಗಳ ಸಂಖ್ಯೆ 1000 ಸಮೀಪಿಸಿದೆ. ಪಶ್ಚಿಮ ಏಶ್ಯಾದಲ್ಲೆ ಉತ್ತಮ ವೈದ್ಯಕೀಯ ಸೇವೆ ಹೊಂದಿರುವ ಇರಾನ್ ನ ವೈದ್ಯಕೀಯ ವ್ಯವಸ್ಥೆ ಅಮೆರಿಕದ ಆರ್ಥಿಕ ದಿಗ್ಬಂಧನದಿಂದಾಗಿ ದುರ್ಭರ ಸ್ಥಿತಿಯಲ್ಲಿದೆ.

ಅಮೆರಿಕದ ಆರ್ಥಿಕ ದಿಗ್ಬಂಧನಗಳು ಸೃಷ್ಟಿಸಿರುವ ವೈದ್ಯಕೀಯ ಸಲಕರಣೆ, ಔಷಧಿ ಇತ್ಯಾದಿಗಳ ತೀವ್ರ ಕೊರತೆಯಿಂದಾಗಿ ಇರಾನ್ ನ ವೈದ್ಯಕೀಯ ವ್ಯವಸ್ಥೆ ಸಾಮಾನ್ಯ ಸ್ಥಿತಿಯನ್ನು ಸಹ ನಿಭಾಯಿಸಲಾಗದ ದುಸ್ಥಿತಿಯಲ್ಲಿದೆ. ಕೊರೊನಾವೈರಸ್ ಸೋಂಕು ತಗಲಿದವರ ಮಹಾಪೂರದ ಅಸಾಮಾನ್ಯ ಸ್ಥಿತಿಯನ್ನು ಎದುರಿಸುವ ಸ್ಥಿತಿಯಲ್ಲಿ ಅದು ಖಂಡಿತ ಇಲ್ಲ. ಕೋಟಿಗಟ್ಟಲೆ ಮುಖಗವುಸು (ಮಾಸ್ಕ್) ಗಳನ್ನು ಅದು ತುರ್ತಾಗಿ ಆಮದು ಮಾಡಬೇಕಾಗಿದೆ. ಆದರೆ ದಿಗ್ಬಂಧನದಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅದು ಕೊರೊನಾವೈರಸ್ ವಿರುದ್ಧ ಹೋರಾಡುವ ಸ್ಥಿತಿಯಲ್ಲಿ ಇಲ್ಲ. ಅಮೆರಿಕ ಇಂತಹ ಪರಿಸ್ಥಿತಿಯಲ್ಲೂ ಆರ್ಥಿಕ ದಿಗ್ಬಂಧನಗಳನ್ನು ಮುಂದುವರೆಸಿರುವುದನ್ನು ಇರಾನಿನ ವಿದೇಶ ಸಚಿವ“ಮೆಡಿಕಲ್ ಭಯೋತ್ಪಾದನೆ” ಮತ್ತು “ಅನೈತಿಕ’ ಕ್ರಮ ಎಂದುಕರೆದಿದ್ದಾರೆ.

ದಿಗ್ಬಂಧನ ಔಷಧಿಗೆ ಅನ್ವಯವಾಗುವುದಿಲ್ಲ ಎಂದು ಅಮೆರಿಕ ಹೇಳುತ್ತದೆ. ಆದರೆ ವಾಸ್ತವದಲ್ಲಿ ಇರಾನಿಗೆ ಯಾವುದೇ ವೈದ್ಯಕೀಯ ನೆರವು ನೀಡುವ ಕಂಪನಿಗಳ ಅಥವಾಸ್ವಿಸ್ ಮಾನವೀಯ ಸಂಸ್ಥೆಗಳ ಮೇಲೂ ನಿರ್ಬಂಧ ಹೇರುವ ಮೂಲಕ ಔಷಧಿ ಪೂರೈಕೆಯಾಗದಂತೆ ನೋಡಿಕೊಳ್ಳುತ್ತಿದೆ. ವಿದೇಶದಲ್ಲಿರುವ ಇರಾನ್ ನ ಹಣಕಾಸು ಮೂಲಗಳನ್ನು ಬ್ಲಾಕ್ ಮಾಡುವ ಮೂಲಕ ಅದುಯಾವುದೇ ತುರ್ತು ಖರೀದಿ ಮಾಡದಂತೆ ಮಾಡಿದೆಎಂದು ಇರಾನ್ ಸರ್ಕಾರದ ಮೂಲಗಳು ತಿಳಿಸಿವೆ.

ಅಮೆರಿಕದ ಮತ್ತು ಜಗತ್ತಿನ ಎಲ್ಲೆಡೆ ಹಲವಾರು ಮಾನವೀಯ ಧೋರಣೆಯ ಎನ್.ಜಿ.ಒ ಗಳು, ಚಳುವಳಿಗಳು, ಪ್ರಗತಿಪರ ವ್ಯಕ್ತಿಗಳು ಸಂಘಟನೆಗಳು ಕೊರೊನಾವೈರಸ್ ಮಹಾಮಾರಿಯಿಂದ ಸಾವಿರಾರು ಜೀವಗಳನ್ನು ರಕ್ಷಿಸುವ ದೃಷ್ಟಿಯಿಂದ ಇರಾನ್ ಮೇಲಿನ ದಿಗ್ಬಂಧನ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿವೆ, ಮನವಿ ಮಾಡಿವೆ. ಅಧ್ಯಕ್ಷ ಟ್ರಂಪ್ ಇದಕ್ಕೆಲ್ಲ ಸ್ಪಂದಿಸುವ ವ್ಯಕ್ತಿಯಲ್ಲ ಎಂದು ಅವರಿಗೆಲ್ಲ ಗೊತ್ತಿರುವುದರಿಂದ ಅವರಲ್ಲಿ ಹಲವರು ಈಗಾಗಲೇ ವೈದ್ಯಕೀಯ ಉಪಕರಣ, ಔಷಧಿ ಮತ್ತಿತರ ಕೊರೊನಾವೈರಸ್ ಮಹಾಮಾರಿಯ ವಿರುದ್ಧ ಹೋರಾಟಕ್ಕೆ ಬೇಕಾಗುವ ಸಲಕರಣೆಗಳ ಉತ್ಪಾದಕರು ಹಂಚಿಕೆದಾರರು ಅಮೆರಿಕದ ದಿಗ್ಬಂಧನ ಧಿಕ್ಕರಿಸಿ ಇವನ್ನು ಇರಾನಿಗೆ ಕಳಿಸಲು ಮನವಿ ಮಾಡಿದ್ದಾರೆ. ಇದರ ಸುತ್ತಜಾಗತಿಕ ಚಳುವಳಿಯನ್ನು ಹರಿಯಬಿಡಲು ಪ್ರಯತ್ನಿಸುತ್ತಿದ್ದಾರೆ.

ಅಮೆರಿಕದ ದಿಗ್ಬಂಧನವನ್ನು ಧಿಕ್ಕರಿಸಿ ಚೀನಾ ಈಗಾಗಲೇ ಇರಾನಿಗೆ ವೈದ್ಯಕೀಯ ನೆರವು ಕಳಿಸುತ್ತಾ ಬಂದಿದೆ. ಅಮೆರಿಕಕ್ಕೆ ದಿಗ್ಬಂಧನವನ್ನು ಹಿಂತೆಗೆಯಬೇಕೆಂದು ಸಹ ಅದು ಆಗ್ರಹಪಡಿಸಿದೆ. ರಶ್ಯ ಸಹ ಅದೇ ಆಗ್ರಹವನ್ನು ಮಾಡಿದೆ. “ಜಾಗತಿಕ ಮಹಾಮಾರಿಯ ಸಮಯ, ಪ್ರಾದೇಶಿಕ-ರಾಜಕೀಯ ಮೇಲಾಟದಲ್ಲಿ ತೊಡಗುವ ಸಮಯವಲ್ಲ. ಅದೂ ಯಾವುದೇ ಆಧಾರವಿಲ್ಲದ ತನ್ನ ಹಿತಾಸಕ್ತಿ ಕಾಪಾಡಲು ಅಮೆರಿಕದಲ್ಲಿ ಉತ್ಪಾದಿಸಲಾದ ಆಪಾದನೆಗಳನ್ನು ಮಾಡುತ್ತಾಕೂಡುವ ಸಮಯವಲ್ಲ” ಎಂದು ರಶ್ಯದ ವಿದೇಶ ಸಚಿವಾಲಯ ಹೇಳಿದೆ. ಇರಾನಿನ ಕೊರೊನಾವೈರಸ್ ಮಹಾಮಾರಿಗೆ ಬಲಿಯಾದವರಲ್ಲಿ ಅಮೆರಿಕದ ದಿಗ್ಬಂಧನಕ್ಕೆ ಬಲಿಯಾದವರೇ ಹೆಚ್ಚು. ಅದನ್ನು ಹಿಂತೆಗೆಯದಿದ್ದರೆ ಅದರ ಬಲಿಗಳ ಸಂಖ್ಯೆ ಹೆಚ್ಚಲಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

(ಈ ವಾರದ ಜನಶಕ್ತಿ ವಾಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version