ಸಿನಿ ಸುದ್ದಿ
ಭೈರವ ಧನಂಜಯ್ ಗೆ ಇರಾ ಜೋಡಿ !
ಸುದ್ದಿದಿನ ಡೆಸ್ಕ್: ರಾಮ್ ಗೋಪಾಲ್ ವರ್ಮಾ ನಿರ್ಮಾಣದ, ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಭೈರವ ಗೀತಾ ಸಿನಿಮಾಕ್ಕೆ ಇರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಇರಾ ಕನ್ನಡಕ್ಕೆ ಹೊಸ ಮುಖವಾಗಿದ್ದು, ಮನೋಜ್ಞ ಅಭಿನಯದ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಇನ್ನು ಭೈರವ ಗೀತಾ ಸಿನೆಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಹೊಸ ನಿರ್ದೇಶಕ ಸಿದ್ದಾರ್ಥ ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರೀಕರಣವು ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ. ರಾಮ್ ಗೋಪಾಲ್ ವರ್ಮಾ, ಭಾಸ್ಕರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕನ್ನಡದ ಡಾಲಿ ಧನಂಜಯ ಹಾಗೂ ನಾಯಕಿ ಇರಾ ಅವರಿಗೆ ದೊಡ್ಡ ವೇದಿಕೆಯಾಗಿದೆ.
Irra-select-rgvs-bhairava-geetha-film