ಸಿನಿ ಸುದ್ದಿ
ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ
ಸುದ್ದಿದಿನ, ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಮುಂಬೈನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅಲ್ಲಿ ಅವರು ಕರುಳಿನ ಸೋಂಕಿಗೆ ಸಂಬಂಧಿಸಿದ ಕ್ಯಾನ್ಸರ್ ಖಾಯಿಲೆ ಹಿನ್ನೆಲೆ ದಾಖಲಾಗಿದ್ದರು. 53 ವರ್ಷದ ನಟ 2018 ರಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು.
ನಟನ ಅಧಿಕೃತ ವಕ್ತಾರರು ಮಂಗಳವಾರ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ಖಚಿತಪಡಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ತಿಳಿಸಿದ್ದಾರೆ. ಇರ್ಫಾನ್ ಖಾನ್ ಪತ್ನಿ ಸುತಪಾ ಮತ್ತು ಪುತ್ರರಾದ ಬಾಬಿಲ್ ಮತ್ತು ಅಯಾನ್ ಅವರನ್ನು ಅಗಲಿದ್ದಾರೆ. ಚಲನಚಿತ್ರ ನಿರ್ಮಾಪಕ ಶೂಜಿತ್ ಸಿರ್ಕಾರ್ ಅವರು ನಟನನ್ನು ಇರ್ಫಾನ್ ನೆನೆ್ದುದು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243