/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಇಶ್ರತ್ ಜಹಾನ್ ಪ್ರಕರಣ: ಅಧಿಕಾರಿಗೆ ಜೀವ ಬೆದರಿಕೆ

ಮಣಿ ಅವರ ಪರ ವಕೀಲರು ಇ ಮೇಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

Published

on

ಸುದ್ದಿದಿನ ಡೆಸ್ಕ್: ಇಶ್ರತ್ ಜಹಾನ್ ಎನ್‍ಕೌಂಟರ್ ಪರಕರಣದ ಅಫಿಡವಿಟ್‍ಗಳಿಗೆ ಸಹಿ ಮಾಡಿದ ಕೇಂದ್ರ ಗೃಹ ಇಲಾಖೆ ಅಧಿಕಾರಿ ಆರ್ ವಿ ಎಸ್ ಮಣಿ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದು, ಈ ಪ್ರಕರಣ ಜಾ¯ತಾಣಗಳಲ್ಲಿ ವೈರಲ್ ಆಗಿದೆ.
ದ್ವಾರಕಾದಲ್ಲಿ ನೆಲೆಸಿರುವ ಮಣಿ ಅವರು ಸಂಜೆ ವಾಯುವಿಹಾರಕ್ಕೆ ತೆರಳಿದ್ದಾಗ ಎಸ್‍ಯುವಿ ಕಾರನಲ್ಲಿ ಬಂದ ಕೆಲವರು ಗುರುಗಾಂವ್‍ಗೆ ಹೋಗುವ ದಾರಿ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಹಿಂಬದಿ ಕುಳಿತಿದ್ದ ವ್ಯಕ್ತಿಯೊಬ್ಬ “ಹಿಂದೂಗಳ ನಾಯಕನಾಗಲು ಹೊರಟಿದ್ದೀಯಾ? ಕತ್ತರಿಸಿ ಹಾಕುತ್ತೇವೆ’ ಎಂದು ಹೇಳಿದ್ದಾಗಿ ಮಣಿ ಅವರು ತಮ್ಮ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.
ಮಣಿ ಅವರ ಪರ ವಕೀಲರು ಇ ಮೇಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇಶ್ರತ್ ಪರಕರಣದಲ್ಲಿ ವಿಚಾರಣೆಗೊಳಗಾಗಿದ್ದ ಮಣಿ ಅವರು ತಮ್ಮ ಹೇಳಿಕೆ ಬದಲಿಸಿ ಹೊಸ ಅಫಿಡವಿಟ್ ಸಲ್ಲಿಸಿದ್ದರು. ಈ ಹಿಂದೆ ತಾವು ಈ ಪ್ರಕರಣದಲ್ಲಿ ನೀಡಿದ್ದ ಹೇಳಿಕೆಯ ಹಿಂದೆ ರಾಜಕೀಯ ಒತ್ತಡ ಇತ್ತು ಎಂದು ಅವರು ಹೊಸ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಶ್ರತ್ ಜಹಾನ್‍ಗೂ ಉಗ್ರಗಾಮಿ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಮಣಿ ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಈಗ ಪ್ರತಿಕೂಲ ಹೇಳಿಕೆ ನೀಡಿ ಸಹಿ ಹಾಕಿದ್ದಾರೆ. ಇಶ್ರತ್ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆ ನಡೆಸುವಾಗ ಪೊಲೀಸರು ಸಿಗರೇಟ್ ಕಿಡಿಯಿಂದ ತಮ್ಮನ್ನು ಸುಟ್ಟು, ತಾವು ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದರು ಎಂಬುದಾಗಿ ಮಣಿ ಅವರು ಬರೆದಿರುವ ಹಿಂದೂ ಟೆರರ್ ಪುಸ್ತಕದಲ್ಲಿ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version