ದಿನದ ಸುದ್ದಿ

ADITYA-L1 | ಇಸ್ರೋ ಆದಿತ್ಯ ಎಲ್-1 ನೌಕೆ ಉಡಾವಣೆಗೆ ಒಂದು ವರ್ಷ; ಸೂರ್ಯನ ಅಧ್ಯಯನದಲ್ಲಿ ಮಹತ್ವದ ಪ್ರಗತಿ

Published

on

ಸುದ್ದಿದಿನಡೆಸ್ಕ್:ಇಸ್ರೋದಿಂದ ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. 2023ರ ಸೆಪ್ಟೆಂಬರ್ 2 ರಂದು ಉಡಾವಣೆಗೊಂಡಿರುವ ಎಲ್-1ನೌಕೆ ಕಕ್ಷೆ ತಲುಪಿದ್ದು, ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಸೂರ್ಯನ ಅಧ್ಯಯನದಲ್ಲಿ ತೊಡಗಿದೆ.

ಸೂರ್ಯನಲ್ಲಿನ ಶಾಖ, ಸೌರ ಭೂಕಂಪಗಳು ಹಾಗೂ ಸೌರ ಜ್ವಾಲೆ ಸಂಬಂಧಿತ ಚಟುವಟಿಕೆಗಳನ್ನು ಈ ನೌಕೆ ಅಧ್ಯಯನ ಮಾಡಲಿದೆ. ಸೂರ್ಯ ತಾಪಮಾನ, ಭೂಮಿಯ ಮೇಲ್ಮೈ ಸಮೀಪದ ವಾತಾವರಣ ಮತ್ತು ಸಂಬಂಧಿತ ಹವಾಮಾನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಇದರಿಂದ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.

ಸೆಪ್ಟೆಂಬರ್ 2 ರಂದು ಆದಿತ್ಯ-ಎಲ್1 ಮಿಷನ್ ಉಡಾವಣೆಯಾಗಿದ್ದು, ಸೆಪ್ಟೆಂಬರ್ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತ್ತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಉದ್ದೇಶಿಸಿರುವ ಲ್ಯಾಂಗ್ರೇಜ್ ಪಾಯಿಂಟ್‌ನತ್ತ ಆದಿತ್ಯ ಎಲ್-1 ಮಿಷನ್ ಸಾಗಿತ್ತು. ಈ ವರ್ಷದ ಜನವರಿ 8 ತಾರೀಖಿನಿಂದ ಈ ಉಪಗ್ರಹ ಸೂರ್ಯ ಕಾರ್ಯಾಚರಣೆಗಳ ಮಾಹಿತಿ ಒದಗಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version