ದಿನದ ಸುದ್ದಿ

ಚಳ್ಳಕೆರೆ | ಇಸ್ರೋದ ಮತ್ತೊಂದು ಸಾಧನೆ : ‘ಪುಷ್ಪಕ್‌’ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ

Published

on

ಸುದ್ದಿದಿನ,ಚಳ್ಳಕೆರೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಪರೀಕ್ಷಾ ವಲಯದಿಂದ ’ಪುಷ್ಪಕ್’ ಹೆಸರಿನ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಗೊಳಿಸಿದೆ. ಇದು ಮೂರನೇ ಹಾಗೂ ಕೊನೆಯ ಪ್ರಾಯೋಗಿಕ ಉಡಾವಣೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಭಾನುವಾರ ಬೆಳಗ್ಗೆ 7 ಗಂಟೆ 10 ನಿಮಿಷಕ್ಕೆ ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್ ಯಶಸ್ವಿಯಾಗಿರುವುದಾಗಿ ಹೇಳಿದೆ. ರಾಕೇಟ್ ಉಡಾವಣೆ ಮಾಡಿದ ಬಳಿಕ ಸುಮಾರು 4.5 ಕಿಲೋಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ನಂತರ ಸುರಕ್ಷಿತವಾಗಿ ಕೆಳಗಿಳಿಯಿತು.

ಇದರೊಂದಿಗೆ ಮರು ಬಳಕೆ ಮಾಡಬಹುದಾದ ರಾಕೇಟ್ ತಂತ್ರಜ್ಞಾನದಲ್ಲಿ ಇಸ್ರೊ ಮಹತ್ವದ ಸಾಧನೆ ಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ. ಇಸ್ರೋ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಮೂರನೇ ಹಾಗೂ ಅಂತಿಮ ಪ್ರಾಯೋಗಿಕ ಪರೀಕ್ಷೆಯಲ್ಲಿ ಪುಷ್ಪಕ್ ತನ್ನ ನಿರ್ದಿಷ್ಟ ಸ್ಥಾನದಲ್ಲಿ ಲ್ಯಾಂಡ್ ಆಗಿದೆ ಎಂದು ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version