/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಇದು ಚಿತ್ರ ವಿಚಿತ್ರ ಫ್ಯಾಷನ್ ಕಾಲ..!

Published

on

ಹೆಣ್ಣು ಮಕ್ಕಳು ತಲೆಗೂದಲಿಗೆ ಜಡೆ ಹಾಕುವುದು ಸಾಮಾನ್ಯ. ಆದ್ರೆ ಇಲ್ಲಿ  ಹುಬ್ಬಿಗೂ ಜಡೆ ಹಾಕುತ್ತಿದ್ದಾರೆ! ಹೆಣ್ಣು ಮಕ್ಕಳು ಕಿವಿ-ಮೂಗು ಚುಚ್ಚಿಸಿಕೊಳ್ಳುವುದು ಸಾಮಾನ್ಯ. ಈಗಂತೂ ಗಂಡು ಹೈಕಳು ಹಾಗೂ ಹೆಣ್ಣುಮಕ್ಕಳಿಬ್ಬರೂ ಕಿವಿ ತುಂಬಾ ಓಲೆ ಹಾಕಿಕೊಂಡು ಓಡಾಡುತ್ತಿರುವುದು ಸಾಮಾನ್ಯ. ಇತ್ತೀಚೆಗೆ ಸ್ಟೈಲ್ -ಫ್ಯಾಷನ್ ಹೆಸರಲ್ಲಿ ಹಲವಾರು ಚಿತ್ರ-ವಿಚಿತ್ರ ಎನಿಸುವ ಟ್ರೆಂಡ್ ಗಳು ಫ್ಯಾಷನ್ ದುನಿಯಾದಲ್ಲಿ ವೈರಲ್ ಆಗುತ್ತಿದೆ. ಅಂತಹದೇ ಸಾಲಿಗೆ ಸೇರಿದ ಟಾಪ್ ತ್ರೀ ಫ್ಯಾಷನ್ ವಿಚಿತ್ರ ಇಲ್ಲಿದೆ ನೋಡಿ…

1. ನಾಲಿಗೆಗೂ ಬಂತು ಆಭರಣ !

ಹಿಂದೆ ಜನ ಕಿವಿ-ಮೂಗು ಚುಚ್ಚಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಇಂದಿಗೂ ಈ ರೂಢಿ ಮುಂದುವರೆದಿದೆ. ಬುಡಕಟ್ಟು ಜನಾಂಗಗಳಲ್ಲಿ ಪ್ರಚಲಿತ ವಾಗಿದ್ದ ಹಲವಾರು ಸಾಂಪ್ರದಾಯಿಕ ಆಭರಣಗಳು ಇಂದು ಫ್ಯಾಷನ್ ರೂಪ ತಾಳಿದೆ.

ಕಿವಿ ತುಂಬಾ ರಂಧ್ರ ಮಾಡಿ ಐದಾರು ಓಲೆ ಹಾಕುತ್ತಿದ್ದ ಮಹಿಳೆಯರು ಈಗ ಅದು ಸಾಲದು ಎಂಬಂತೆ ನಾಲಿಗೆ ಚುಚ್ಚಿಸಿಕೊಳ್ಳುವುದು.. ನಾಲಿಗೆ ಆಭರಣ ತೊಟ್ಟು ಫ್ಯಾಷನ್ ಎನ್ನುತ್ತಿದ್ದಾರೆ! ಈಗಾಗಲೇ ಪಾಶ್ಚಾತ್ಯ ದೇಶಗಳಲ್ಲಿ ಬಹಳ ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಈ ಟ್ರೆಂಡ್ ಈಗ ಭಾರತಕ್ಕೂ ಕಾಲಿಟ್ಟಿದೆ.

2. ಕಿವಿಗೆ ಬಂತು ಲವ್ ಲಾಕ್ !

ಈಗಂತೂ ದಿನಕ್ಕೆ ಒಂದು ಟ್ರೆಂಡ್ ಹುಟ್ಟುತ್ತದೆ. ನಾಲಿಗೆ ಆಭರಣ ವಾಯಿತು..ಈಗ ಕಿವಿಗೂ ಲವ್ ಲಾಕ್ ಬಂದಿದೆ ನೋಡಿ..ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ ಈ ಹಾರ್ಟ್ ಶೇಪ್ ಇಯರಿಂಗ್.. ಅದರಲ್ಲೇನು ವಿಶೇಷ ಅನ್ನುತ್ತೀರಾ… ಈ ಚಿತ್ರ ಇನ್ನೊಮ್ಮೆ ನೋಡಿ.

ಲವ್ ಲಾಕ್ ಆಗಿರುವುದು ಕಿವಿಯ ಒಳಗೆ! ಅಂದಹಾಗೆ ಇದು ಯುವಪೀಳಿಗೆಯ ಹೊಸಾ ಫ್ಯಾಷನ್ ಟ್ರೆಂಡ್!

3. ತರಾವರಿ ಐ-ಬ್ರೋ!

ಹೆಣ್ಣು ಮಕ್ಕಳು ಮೇಕಪ್ ಮಾಡಿಕೊಳ್ಳದಿದ್ರೂ ಐ-ಬ್ರೋ ಮಾಡಿಸಿದಿರಿ ಸಾಕು ಮಖದಲ್ಲಿ ಕಳೆ-ಲಕ್ಷಣ ಹೆಚ್ಚಾಗುತ್ತದೆ.

ಸೊಟ್ಟಗಿರುವ ಹುಬ್ಬನ್ನು ನೆಟ್ಟಗೆ ತಿದ್ದಿ-ತೀಡಿ ಕಾಮನಬಿಲ್ಲಿನಲ್ಲಿ ಆಕಾರದ ನೀಡುತ್ತಾರೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಬಂದಿದೆ ಹೊಸಾ ಐ-ಬ್ರೋ ಟ್ರೆಂಡ್!ಫಿಶ್ ಟೇಲ್ ಐ-ಬ್ರೋ!, ಮಿಕ್ಕಿ- ಬೋ ಐ-ಬ್ರೋ,ಬ್ರೈಡ್ ಐ-ಬ್ರೋ!…

ಇವುಗಳ ಝಲಕ್ ಇಲ್ಲಿದೆ ನೋಡಿ…

Leave a Reply

Your email address will not be published. Required fields are marked *

Trending

Exit mobile version