ಲೈಫ್ ಸ್ಟೈಲ್
ಇದು ಫೇಸ್ಬುಕ್-ವಾಟ್ಸ್ ಅಪ್ ಮೊಗ್ಗಿನ ಜಡೆ ಜಮಾನಾ..!
ಇದು ಸೋಷಿಯಲ್ ಮೀಡಿಯಾ ಎಫೆಕ್ಟ್ ಸ್ವಾಮೀ…
ಇವತ್ತಿನ ತಂತ್ರಜ್ಞಾನ ಆಧಾರಿತ ಬದುಕಿನಲ್ಲಿ ಪ್ರತಿಯೊಬ್ಬರೂ, ಮೊಬೈಲ್ ನ ದಾಸರಾಗಿದ್ದೀವಿ. ಎಲ್ಲರೂ ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಯೂ ಟ್ಯೂಬ್, ಗಳ ದಾಸಾನುದಾಸರೇ. ಜನಜೀವನದ ಮೇಲೆ ಸೋಷಿಯಲ್ ಮೀಡಿಯಾದ ಎಫೆಕ್ಟ್ ಎಷ್ಟರ ಮಟ್ಟಿಗೆ ಇದೆ ಎಂದರೆ, ಊಟ ಮರೆತರೂ ವಾಟ್ಸ್ಅಪ್ ಸ್ಟೇಟಸ್ ನೋಡುವುದನ್ನ ಮರೆಯುವುದಿಲ್ಲ. ಇಂತಹ ಸೋಷಿಯಲ್ ಮೀಡಿಯಾ ದಾಸರ ಕ್ರೇಜ್ ತಿಳಿದಿರುವ ಬ್ಯೂಟಿ ತಜ್ಞರು ಫೇಸ್ಬುಕ್-ವಾಟ್ಸ್ ಅಪ್- ಟ್ವಿಟ್ಟರ್ ಗಳ ಮೊಗ್ಗಿನ ಜಡೆ ರೆಡಿ ಮಾಡಿಯೇ ಬಿಟ್ಟರು. ಇದನ್ನು ತೊಟ್ಟು ಫೋಟೋ ಕ್ಲಿಕ್ಕಿಸಿ ಮತ್ತದೇ ಸೋಷಿಯಲ್ ಮೀಡಿಯಾ ಇದನ್ನು ವೈರಲ್ ಕೂಡಾ ಮಾಡಿದೆ..!
ನೈಲ್ ಆರ್ಟ್
ಸೋಷಿಯಲ್ ಮೀಡಿಯಾ ಎಫೆಕ್ಟ್ ಇಷ್ಟಕ್ಕೇ ನಿಂತಿಲ್ಲ. ಕೈ ಉಗುರುಗಳ ನೈಲ್ಸ್ ಆರ್ಟ್ ರೂಪದಲ್ಲಿ ಮತ್ತದೇ ಫೇಸ್ಬುಕ್-ವಾಟ್ಸ್ ಅಪ್ – ಟ್ವಿಟ್ಟರ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿಸಿಕ್ಕಾಪಟ್ಟೆ ವೈರಲ್ ! ನೀವೂ ಸೋಷಿಯಲ್ ಮೀಡಿಯಾ ಫ್ಯಾನ್ ಗಳಾಗಿದ್ದಲ್ಲಿ.. ಈ ಸೋಷಿಯಲ್ ಮೀಡಿಯಾ ನೈಲ್ ಆರ್ಟ್ ಒಮ್ಮೆ ಟ್ರೈ ಮಾಡಿ ನೋಡಿ.