ರಾಜಕೀಯ
ಎಚ್.ಡಿ.ಕೆ ವಿರುದ್ಧ ಚಿಕ್ಕೋಡಿಯಲ್ಲಿ ಜಗದೀಶ್ ಶೆಟ್ಟರ್ ವಾಗ್ದಾಳಿ
ಸುದ್ದಿದನ, ಚಿಕ್ಕೋಡಿ | ಸಿಎಂ ಕುಮಾರ ಸ್ವಾಮಿ ನೀರಾವರಿ ಕೆಲ ಕಚೇರಿ ಬೆಳಗಾವಿಗೆ ತೆಗೆದುಕೊಂಡು ಹೋಗುತ್ತೇನೆ, ಬೆಳಗಾವಿ ಎರಡನೇ ರಾಜಧಾನಿ ಮಾಡುತ್ತೇನೆಂಬ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ ಎಂದು ಚಿಕ್ಕೋಡಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ವಿರುದ್ದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಸಚಿವ ಎಚ್ ಡಿ ರೇವಣ್ಣ ಅವರ ಕಂಟ್ರೋಲ್ನಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿನ ಬೆಳಗಾವಿಯಲ್ಲಿದ್ದ ಕೆಸಿಪ್ ಕಚೇರಿ ಹಾಸನಕ್ಕೆ ತೆಗೆದುಕೊಂಡು, ಸಬ್ ಡಿವಿಜನ್ ನನ್ನು ಹೊಳೆನರಸಿಪುರಕ್ಕೆ ಹೋಗುತ್ತಿರುವುದೇಕೆ? ಕೆಸಿಎಪ್ ಕಚೇರಿಯಲ್ಲಿನ ಕೆಲಸಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದರು
ಕೇವಲ ಹಾಸನ, ಹೊಳೆ ನರಸಿಪುರ ನೆನಪಾಗುತ್ತೇನು? ಬೇರೆಯದ್ದು ನೆನಪಾಗುವುದಿಲ್ಲವೇ? ಇವರು ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರೋ ಅಥವಾ ಹಾಸನ ಮಂಡ್ಯ, ಹೊಳೆ ನರಸಿಪುರಕ್ಕೆ ಮಾತ್ರ ಮಂತ್ರಿಗಳು ಎಂಬ ಪ್ರಶ್ನೇ ಕೇಳಬೇಕಾಗುತ್ತದೆ. ಇವರ ನಡುವಳಿಕೆ ನೋಡಿದರೆ ತೋರಿಕೆಗೆ ಮಾತ್ರ ಉತ್ತರ ಕರ್ನಾಟಕಕ್ಕೆ
ಕಾಳಜಿ.ನಿಜವಾಗಿ ಮಾಡುತ್ತಿರುವುದು ಅನ್ಯಾಯ ಎಂದು ಕೆಂಡಾಮಂಡಲವಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401