ದಿನದ ಸುದ್ದಿ
ಜಗಳೂರು | ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿ ಕೊಂದ ಪತಿ
ಸುದ್ದಿದಿನ,ದಾವಣಗೆರೆ : ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನ ಪತಿ ಕೊಲೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಹೊಸಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಸತ್ಯಮ್ಮ ಎಂಬಾಕೆ ಪತಿಯಿಂದ ಕೊಲೆಯಾಗಿದ್ದು, ತಾಲೂಕಿನ ಹೊಸಬುಳ್ಳಾಪುರ ಗ್ರಾಮದ ಆಕೆಯನ್ನ ಕಳೆದ 12 ವರ್ಷಗಳ ಹಿಂದೆ ಜಗಳೂರು ತಾಲೂಕಿನ ಉಜ್ಜಪ್ಪವಡೆಯರಹಳ್ಳಿಯ ಅಣ್ಣಪ್ಪ ಎಂಬಾಂತ ಪ್ರೇಮಿಸಿ ಮದುವೆಯಾಗಿದ್ದ. ಇವರಿಬ್ಬರ ಸುಖ ಸಂಸಾರಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇತ್ತು. ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅಣ್ಣಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ.
ಕುಡಿದು ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಅಣ್ಣಪ್ಪ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ರಾಜಿ ಸಂದಾನ ಕೂಡ ನಡೆದಿದ್ದು ಪೊಲೀಸರು ಹೊಂದಿ ಕೊಂಡು ಹೋಗುವಂತೆ ಬುದ್ದಿ ಹೇಳಿದ್ದರು. ಆದರೂ ಕುಡಿದು ಬಂದು ಹೆಂಡತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಅಣ್ಣಪ್ಪ ನಿತ್ಯ ದುಡ್ಡಿಗಾಗಿ ಹೆಂಡತಿಯನ್ನ ಪೀಡಿಸುತ್ತಿದ್ದ. ಅದೇ ರೀತಿ ಗೃಹಲಕ್ಷ್ಮಿ ಹಣ ಕಳೆದ ವಾರವಷ್ಟೇ ಸತ್ಯಮ್ಮನ ಅಕೌಂಟ್ ಗೆ ಬಂದಿದೆ. ಅತಿಯಾದ ಮಳೆಯಿಂದ ಕೂಲಿ ಕೆಲಸ ಇಲ್ಲದೇ ಪರದಾಡುತ್ತಿದ್ದ ಅಣ್ಣಪ್ಪ ಪತ್ನಿ ಸತ್ಯಮ್ಮಳಿಗೆ ಗೃಹ ಲಕ್ಷ್ಮಿ ಹಣ ಬಿಡಿಸಿಕೊಡುವಂತೆ ಪೀಡಿಸುತ್ತಿದ್ದನಂತೆ.
ಅಣ್ಣಪ್ಪನ ಕಾಟ ತಾಳಲಾರದೆ ಸತ್ಯಮ್ಮ ಮಗನೊಂದಿಗೆ ಅಸಗೋಡು ಗ್ರಾಮದ ಕೆನರಾ ಬ್ಯಾಂಕ್ ಶಾಖೆಗೆ ಹಣ ಬಿಡಿಸಿಕೊಳ್ಳಲು ಬಂದಾಗ ಹಿಂಬಾಲಿಸಿದ ಅಣ್ಣಪ್ಪ ಬ್ಯಾಂಕ್ ನಲ್ಲೆ ಹಣ ಕೊಡು ಎಂದು ಹೆಂಡತಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಕೊನೆಗೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಬಳಿಕ ಉಜ್ಜಪ್ಪರವಡೇರಹಳ್ಳಿ ಸಮೀಪದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ಕೊಲೆ ಮಾಡಿ ಮೈನ್ಸ್ ವಯರ್ ಕೆಳಗೆ ಬಿಸಾಕಿ ಹೋಗಿದ್ದಾನೆ. ಅಲ್ಲದೆ ಕರೆಂಟ್ ಹೊಡೆದು ಸತ್ತೋಗಿದ್ದಾಳೆ ಎಂದು ಕಥೆ ಕಟ್ಟಿದ್ದನಂತೆ.
ಇನ್ನು ಸತ್ಯಮ್ಮ ಸತ್ತಾಗಿನಿಂದ ಅಣ್ಣಪ್ಪ ಹಾಗೂ ಆತನ ಕುಟುಂಭಸ್ಥರು ತಲೆಮರೆಸಿಕೊಂಡಿದ್ದು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ರವಾನೆ ಮಾಡಿದ್ದು, ಕೊಲೆ ಆರೋಪಿ ಅಣ್ಣಪ್ಪ ವಿರುದ್ದ ಸತ್ಯಮ್ಮ ಸಂಬಂಧಿಕರು ಅಕ್ರೋಶ ಹೊರ ಹಾಕಿದ್ದು, ಆತನಿಗೆ ತಕ್ಕ ಶಿಕ್ಷೇಯಾಗಲಿ ಎಂದು ಹಿಡಿ ಶಾಪ ಹಾಕಿದರು.
ಇದೀಗ ಅಣ್ಣಪ್ಪ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243