ದಿನದ ಸುದ್ದಿ

ಜಗಳೂರು | 2.40 ಟಿಎಂಸಿ ನೀರು ಕೊಡಲು‌ ಆದೇಶ

Published

on

ಸುದ್ದಿದಿನ,ಜಗಳೂರು : ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯು ಹಮ್ಮಿಕೊಂಡಿದ್ದ ತಾಲೂಕಿನ ಸಮಗ್ರ ನೀರಾವರಿ ಅನುಷ್ಟಾನಕ್ಕೆ ಒತ್ತಾಯಿಸಿ ಅನಿರ್ದಿಷ್ಟವಾದಿ ಮುಷ್ಕರಕ್ಕೆ‌ ಜಯಸಿ್ಕ್ಕಿಕ್ಕಿದ್ದು, 2.40 ಟಿಎಂಸಿ ನೀರು ಕೊಡಲು ಭದ್ರಾ ಮೇಲ್ದಂಡೆ ಇಂಜಿನಿಯರ್ ಗಳು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿವೈಎಸ್ಎಪಿ ನಾಗೇಶ್ ಐತಾಳರು ಆಗಮಿಸಿ ನಿಮ್ಮ ಹೋರಾಟಕ್ಕೆ ಪ್ರಾರಂಭದ ಹಂತದಲ್ಲಿ ಹೋರಾಟಕ್ಕೆ ಜಯಸಿಕ್ಕಿದೆ ನಿಮ್ಮ ಬೇಡಿಕೆಯಾದ 2.40 ಟಿ ಎಮ್ ಸಿ ಸಂಪೂರ್ಣ ನೀರನ್ನು ನಿಮಗೆ ಕೊಡಲು ಭದ್ರಾಮೇಲ್ದಂಡೆ ಇಂಜಿನಿಯರ್ಗಳು ಒಪ್ಪಿ ಆದೇಶವನ್ನು ಒದಗಿಸಿದ್ದಾರೆ.
ಮೊದಲ ಹಂತದ ಜಯ ನಿಮಗೆ ಲಭಿಸಿದೆ ಅದುದರಿಂದ ಈ ಹೋರಾಟ ಸದ್ಯದ ಮಟ್ಟಿಗೆ ಹೋರಾಟವನ್ನು ಸ್ಥಗಿತಗೊಳಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಹೋರಾಟಗಾರರು, ನಮ್ಮ ಮೂಲ ಬೇಡಿಕೆಯಾದ ಬೇಳಘಟ್ಟ ಮಾರ್ಗವಾಗಿ ಸಂಗೇನಹಳ್ಳಿಗೆ ಮಾರ್ಗ ಆದೇಶಹಾಗುವರಿಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಿ ಎಸ್ ಐ ಇಮ್ರಾನ್ ಬೆಗ್ ಸೋಮಲಿಂಗಪ್ಪ ಕುಂಬಾರ್, ಹೋರಾಟ ಸಮಿತಿಯ ಆರ್ ಒಬಳೇಶ್, ಮಹಾಲಿಂಗಪ್ಪ ಅನಂತರಾಜ, ಮಂಜುನಾಥ ಪತ್ರಪ್ಪ ಬಸವರಾಜ ಚಂದ್ರಪ್ಪ ಕೃಷ್ಣಮೂರ್ತ
ಹಾಗೂ ಮೂಡಲ ಮಾಚಿಕೆರೆ ಗ್ರಾಮದ ರೈತರು ಹಾಜರಿದ್ದರು.

Trending

Exit mobile version