ದಿನದ ಸುದ್ದಿ
ಜಗಳೂರು | ಎರಡು ದಿನಗಳ ಬಳಿಕ ಚೆಕ್ ಡ್ಯಾಂನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ
ಸುದ್ದಿದಿನ,ದಾವಣಗೆರೆ: ಜಗಳೂರು ತಾಲೂಕಿನ (Jagaluru Taluku) ಕಲ್ಲೇದೇವರ ಗ್ರಾಮದ ಸಮೀಪ ಹೊಸದಾಗಿ ನಿರ್ಮಿಸಿದ್ದ ಚೆಕ್ ಡ್ಯಾಂನಲ್ಲಿ ಮುಳುಗಿ ಯುವನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಎರಡು ದಿನಗಳ ಬಳಿಕ ಯುವಕನ ಮೃತದೇಹ ( Dead Body ) ಪತ್ತೆ ಆಗಿದೆ.
ಕಲ್ಲೇದೇವರ ಗ್ರಾಮದ ವಿನಯ್(26) ಮೃತಪಟ್ಟ ಯುವಕ. ಮೂವರು ಸ್ನೇಹಿತರೊಂದಿಗೆ ಕಳೆದ ಎರಡು ದಿನಗಳ ಹಿಂದೆ ಚೆಕ್ ಡ್ಯಾಂನಲ್ಲಿ ಈಜಾಡಲು ತೆರಳಿದ್ದ. ಇದರಲ್ಲಿ ವಿನಯ್ ಮೊದಲು ಇಳಿದಿದ್ದ. ಆದರೆ ಅರ್ಧಗಂಟೆಯಾದರು ಮೇಲೇಳಲೇ ಇಲ್ಲ. ಇನ್ನಿಬ್ಬರು ಸ್ನೇಹಿತರು ಹುಡುಕಾಡಿದ್ದಾರೆ. ಆದರೆ ಸಿಕ್ಕಿರಲಿಲ್ಲ.ತಕ್ಷಣವೇ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಐಪಿಎಸ್ ಅಧಿಕಾರಿ ಕನ್ನಿಕಾ ಸಕ್ರಿವಾಲ್, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಪಿಎಸ್‍ಐ ಮಹೇಶ್ ಹೊಸಪೇಟ,ಅಗ್ನಿಶಾಮಕ ಠಾಣಾಧಿಕಾರಿ ಹನುಮಂತರಾಯ, ಆರ್. ಐ. ಕುಬೇರ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243