ಲೈಫ್ ಸ್ಟೈಲ್

ಜೈ ಜವಾನ್ ..! ಸೈನಿಕ ಸಹೋದರರ ಅಭಿಮಾನದ ಪ್ರತೀಕವಾಗಿದೆ ‘ಜೈ ಜವಾನ್’ ನೈಲ್ ಆರ್ಟ್

Published

on

ಸೈನಿಕ ಸಹೋದರರೆ, ಇದೋ ನಿಮಗೆ ನಮ್ಮ ನಮನ

ತಾಯಿನಾಡಿಗಾಗಿ ಗಾಡಿಯಲ್ಲಿ ಪ್ರಾಣ ತೆತ್ತ ಅದೆಷ್ಟೋ ವೀರ ಸೈನಿಕ  ಸಹೋದರರ ಸ್ಮರಣಾರ್ಥ ಕಾರ್ಗಿಲ್ ವಿಜಯ ದಿವಸ್ ಅನ್ನು ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುತ್ತದೆ. ಅಂದು ಎದೆಗುಂದದೆ ಶತ್ರುಗಳು ಗುಂಡಿಗೆ, ಸಿಡಿಗುಂಡಾಗಿ ಹೋರಾಡಿ ಪ್ರಾಣ ತೆತ್ತ ಸೈನಿಕ ಬಂಧುಗಳ ಸ್ಮರಣಾರ್ಥ ಇಂದು ಭಾರತದಲ್ಲಿ ಗೌರವ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೀ ಹಲವಾರು ಸೈನಿಕ ವಂದನಾರ್ಪಣೆ  ಕಾರ್ಯಕ್ರಮ ಗಳುನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಸಂದರ್ಭದಲ್ಲಿ ಅಂದು ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕ ರ ಸ್ಮರಣಾರ್ಥ ಹಾಗೂ ಎಂದೆಂದಿಗೂ ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟು ಹಗಲೂ-ರಾತ್ರಿ ಗಡಿ ಕಾಯುವ ಸೈನಿಕ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲೆಂದೇ ಮೂಡಿ  ಬಂದಿದೆ ‘ಜೈ ಜವಾನ್ ನೈಲ್ ಆರ್ಟ್’.

ಜೈ ಜವಾನ್ ನೈಲ್ ಆರ್ಟ್

ಸಾಮಾನ್ಯವಾಗಿ ಮುಖಕ್ಕೆ ತಿರಂಗ ಬಣ್ಣ ದ ಟ್ಯಾಟೂ ಹಾಕಿ ಕ್ರಿಕೆಟ್, ಹಾಕಿ.. ಹೀಗೆ ಕ್ರೀಡಾಂಗಣದಲ್ಲಿ … ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ  ದೇಶಪ್ರೇಮ ಸಾರಲಾಗುತ್ತದೆ.  ಸದಾ ದೇಶಕ್ಕಾಗಿ ಹಗಲಿರುಳು ದುಡಿಯುವ ಸೈನಿಕ ಬಂಧುಗಳ ಸ್ಮರಣಾರ್ಥ..ಸೈನಿಕರ  ಉಡುಪುಗಳ ಹೋಲುವ ಮಿಲಿಟರಿ ವಿನ್ಯಾಸದ ನೈಲ್ಸ್ ಆರ್ಟ್ ಸಿದ್ಧ ಗೊಂಡಿದೆ.

ಮಿಲಿಟರಿ ಸಮವಸ್ತ್ರ ದ ಬಣ್ಣಗಳನ್ನು ಕೈ ಉಗುರುಗಳ ಮೇಲೆ ರಚಿಸಲ್ಲಟ್ಟಿದೆ. ಅಂತೆಯೇ.. ಸೈನಿಕರ ಚಿತ್ರ ಗಳನ್ನು  ಕೈ ಉಗುರುಗಳ ಮೇಲೆ ಬಿಡಿಸಿ ಅವರ ಬಲಿದಾನವನ್ನ ಸ್ಮರಿಸಲಾಗುತ್ತಿದೆ.

ಮಿಲಿಟರಿ ಹಸಿರು, ಕಂದು, ಬಿಳಿ, ಕಪ್ಪು ನೈಲ್ ಪಾಲಿಷ್ ಬಳಸಿ ಈ ನೈಲ್ ಆರ್ಟ್ ಮಾಡಲಾಗುತ್ತದೆ.” ಐ ಲವ್ ಮೈ ಸೋಲ್ಡರ್”.. “ಜೈ ಜವಾನ್ ” ..” ಇಂಡಿಯಾ”  ಹೀಗೆ ಹಲವಾರು ಸ್ಲೋಗನ್ ಗಳನ್ನು ಉಗುರುಗಳ  ಮೇಲೆ ಬಿಡಿಸಲಾಗಿದೆ.

ಸದಾ ದೇಶಕ್ಕಾಗಿ ದುಡಿಯುವ ಸೈನಿಕ ಸಹೋದರರ  ತ್ಯಾಗ-ಬಲಿದಾನದ ಸ್ಮರಣಾರ್ಥ ಈ ಜೈ ಜವಾನ್ ನೈಲ್ ಆರ್ಟ್ ಸಿದ್ಧ ಗೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version