ದಿನದ ಸುದ್ದಿ

ಜಲ ಜೀವನ್ ಮಿಷನ್ | 5 ಸಾವಿರದ 9 ಕೋಟಿ ರೂಪಾಯಿ ಅನುದಾನ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಜಲ ಜೀವನ್ ಮಿಷನ್’ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೇಶದ ಪ್ರತಿ ಗ್ರಾಮದ ಮನೆ ಮನೆಗ ಶುದ್ಧ ಕುಡಿಯುವ ನೀರನ್ನು ನಳದ ಮೂಲಕ ತಲುಪಿಸುವ ಯೋಜನೆ, ’ಪ್ರತಿ ಮನೆಗೆ ನೀರು’ ಧ್ಯೇಯದೊಂದಿಗೆ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇಕಡ 50 ರ ಅನುದಾನದೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ 15ಲಕ್ಷ ಕುಟುಂಬಗಳಿಗೆ 2023 ರ ಒಳಗೆ ನೀರು ಸಂಪರ್ಕ ಜೋಡಿಸುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಕೇಂದ್ರ ಸರ್ಕಾರ ರಾಜ್ಯದ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು, 5 ಸಾವಿರದ 9 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version