ಲೈಫ್ ಸ್ಟೈಲ್

ರೆಸಿಪಿ | ಮನೇಲೇ ಮಾಡಿ ಜಿಲೇಬಿ

Published

on

ಬೇಕಾಗುವ ಪದಾರ್ಥಗಳು

ಕಾಲು ಕೆ.ಜಿ. ಮೈದಾ, ಒಂದು ನಿಂಬೇಹಣ್ಣು , ಮೂರು ಚಮಚ ರಿಫೈನ್ಸ್ ಆಯಿಲ್, ಒಂದು ಲೋಟ ಹುಳಿ ಮೊಸರು, ಕಾಲು ಕೆ.ಜಿ. ಸಣ್ಣ ರವೆ, ಕೇಸರಿ ಬಣ್ಣ, ಆರು ಲೋಟ ಸಕ್ಕರೆ, ಕರಿಯಲು ಬೇರೆ ರಿಫೈನ್ಸ್ ಎಣ್ಣೆ, ಎರಡು ಚಮಚ ಹುರಿಗಡಲೆ ಹಿಟ್ಟು.

ತಯಾರಿಸುವ ವಿಧಾನ

ಮೈದಾ, ರವೆ ಹುರಿಗಡಲೆ ಹಿಟ್ಟು ಇವನ್ನು ಒಟ್ಟುಗೂಡಿಸಿ ಅದರಲ್ಲಿ ಹುಳಿ ಮೊಸರು ಹಾಗೂ ಉಗುರು ಬಿಸಿ ನೀರನ್ನು ಹಾಕಿ ನೆನೆ ಇಡಿರಿ. ಅರ್ಧ ದಿನ ಅಂದರೆ ಹನ್ನೆರಡು ಗಂಟೆಗಳ ಕಾಲ ಅದು ನೆನೆದು ಹುಳಿ ಬರಬೇಕು. ಮಾರನೆಯ ದಿನ ಅದರಲ್ಲಿ ಸ್ವಲ್ಪ ನೆನೆ ಎಣ್ಣೆ ಹಾಕಿ, ಕೇಸರಿ ಬಣ್ಣ ಕೂಡಿಸಿ ಚೆನ್ನಾಗಿ ಕಲಕಿ. ಇನ್ನೊಂದು ಪಾತ್ರೆಯಲ್ಲಿ ಒಳ್ಳೆ ಹದಕ್ಕೆ ಸಕ್ಕರೆ ಪಾಕ ಮಾಡಿಟ್ಟು ಕೊಳ್ಳಿ. ಅದಕ್ಕೆ ಕೇಸರಿ ಬಣ್ಣ ಮತ್ತು ನಿಂಬೆ ಹಣ್ಣಿನ ರಸ ಹಾಕಿ ಪಾಕವನ್ನು ಬಿಸಿ ಮಾಡಿ. ಪಾತ್ರೆಯಲ್ಲಿ ರಿಫೈನ್ಸ್ ಎಣ್ಣೆ ಹಾಕಿ ಕುದಿಯುವವರೆಗೆ ಬಿಡಿ.

ಹಾಲಿನ ಪ್ಯಾಕೆಟ್ಟಿನ ತಳದ ಮೂಲೆಯಲ್ಲಿ ಒಂದು ಸಣ್ಣ ರಂಧ್ರ ಮಾಡಿ. ಚೀಲದ ಪ್ಯಾಕೆಟ್ ಮೇಲುಭಾಗವನ್ನು ಅರ್ಧ ಕತ್ತರಿಸಿ ತೆಗೆಯಿರಿ. ಅದರಲ್ಲಿ ಜಿಲೇಬಿ ಹಿಟ್ಟನ್ನು ಹಾಕಿ ಪಾತ್ರೆಯ ಎಣ್ಣೆಗೆ ಜಿಲೇಬಿಗಳನ್ನು ಬಿಡಿ. ಚಿಕ್ಕ ಕತ್ತರಿಯಿಂದ ಜಿಲೇಬಿಗಳನ್ನು ಕತ್ತರಿಸಿ ತಿರುವಿ ಹಾಕಿ. ಕರಿದ ಜಿಲೇಬಿಗಳನ್ನು ಅವು ಗರಿಗರಿ ಇದ್ದಂತೆ ಪಾಕದಲ್ಲಿ ಹಾಕಿ. ಜಿಲೇಬಿ ಪಾಕವನ್ನು ಹೀರಿದಂತೆ ತೆಗೆದು ತಟ್ಟೆಗೆ ಹಾಕಿ, ತಟ್ಟೆಯನ್ನು ತುಸು ಓರೆಯಾಗಿರಿಸಿರಬೇಕು. ಹೀಗೆಯೇ ಉಳಿದುವನ್ನೂ ತಯಾರಿಸಿಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version