ದಿನದ ಸುದ್ದಿ

ಜನಪದ ಕಲೆ ಗ್ರಾಮೀಣ ಜನರ ಜೀವನಾಡಿ : ಪ್ರಾಚಾರ್ಯೆ ಡಾ.ಶಶಿಕಲಾ‌.ಎಸ್

Published

on

ಸುದ್ದಿದಿನ,ಭರಮಸಾಗರ:ಜನಪದ ಕಲೆ ನಮ್ಮ ನಾಡಿನ ಗ್ರಾಮೀಣ ಜನರ ಜೀವನಾಡಿಯಾಗಿದೆ. ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಸಂಸ್ಕೃತಿಯ ಬೇರುಗಳಿದ್ದಂತೆ. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯೇ ಜಾನಪದ ಉತ್ಸವವೆಂದು ಪ್ರಾಚಾರ್ಯೆ ಡಾ.ಶಶಿಕಲಾ ಎಸ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ( 27 ಮಾರ್ಚ್) ನಡೆದ ‘ಜಾನಪದ ಉತ್ಸವ-2025’ ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರಿಂದ ಜನರಿಗೆ ವರ್ಗಾವಣೆ ಯಾಗುವ ಕಲೆಯೇ ಜಾನಪದ. ಇಂತಹ ಜಾನಪದ ಉತ್ಸವಗಳಿಂದ ಗ್ರಾಮೀಣ ಸಂಸ್ಕೃತಿಯನ್ನು ಉನ್ನತೀಕರಿಸಬಹುದು. ಇದನ್ನ ಬೆಳೆಸುವ ಸಂರಕ್ಷಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಪದ ಕಲಾವಿದರಾದ ಪರಮೇಶ್ವರಪ್ಪ ಕಟ್ಟಿಗೆ ಯವರು ಮಾತನಾಡಿ, ತತ್ವಪದಗಳು ಜಾನಪದ ಸಾಹಿತ್ಯದ ಅಂಗವಾಗಿದೆ. ತತ್ವಪದಗಳಿಂದ ಸಮಾಜದ ಸ್ವಾಸ್ಥ್ಯವನ್ನು ತಿದ್ದುವ ಹಸನುಗೊಳಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂದರು.

ಇಂತಹ ಕಲೆಯನ್ನು ನಂಬಿಕೊಂಡವರ ಬದುಕು ಕಷ್ಟವಾಗುತ್ತಿದೆ. ಇಂತಹ ಉತ್ಸವಗಳಿಂದ ನಮ್ಮ ಕಲೆಗೆ ಪ್ರೋತ್ಸಾಹ ನೀಡಿದರೆ ಜಾನಪದ ಕಲೆಯು ಉಳಿಯುತ್ತದೆ ಎಂದು ಅನೇಕ ತತ್ವಪದಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವ ಮೂಲಕ ಅದರ ಮಹತ್ಚ ಸಾರಿದರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಸತ್ಯನಾರಾಯಣ ಹಾಗೂ ಸಮಿತಿಯ ಸದಸ್ಯರಾದ ಚಂದ್ರಕುಮಾರ್ ಎಸ್. ಡಾ.ಗಿರೀಶ್, ಮಸೂದ್ ಅಹಮ್ಮದ್ ಕೆ.ಎಚ್. ಮಮತ, ರಿಯಾಜ್ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version