ದಿನದ ಸುದ್ದಿ

ಜನಾರ್ಧನ ರೆಡ್ಡಿ ಡೀಲ್ ಪ್ರಕರಣ : ರಾಜಮಹಲ್ ಜ್ಯೂವೆಲರಿ ಶಾಪ್ ಬಂದ್..!

Published

on

ಸುದ್ದಿದಿನ, ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಡೀಲ್ ಪ್ರಕರಣ ಮಾಧ್ಯಮಗಳಲ್ಲಿ ಹೊರ ಬರುತ್ತಿದ್ದಂತೆ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ರಾಜಮಹಲ್ ಜ್ಯುವೇಲರಿ ಶಾಪ್ ಬಂದ್ ಮಾಡಲಾಗಿದೆ.

ಸುದ್ದಿ ಪ್ರಸಾರ ಆಗುತ್ತಿದ್ದಂತೆ ಜ್ಯುವೆಲರಿ ಶಾಪ್ ಬಂದ್ ಮಾಡಿ ತೆರಳಿದ ಸಿಬ್ಬಂದಿ, ಈ ಹಿಂದೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿಯೂ ರಮೇಶ್ ಕೊಠಾರಿ ಮಾಲೀಕತ್ವದ ರಾಜಮಹಲ್ ಎಕ್ಸಪೋರ್ಟ್ ಟ್ರೇಡಿಂಗ್ ಕಂಪನಿ ಮೇಲೂ ಆರೋಪ ಬಂದಿತ್ತು, ಬೇಲೇಕೇರಿ ಅದಿರು ನಾಪತ್ತೆ ಮಾಡುವಲ್ಲಿ ರಾಜಮಹಲ್ ಎಕ್ಸಪೋರ್ಟ್ ಪಾತ್ರ ಬಯಲಾಗಿತ್ತು,ಈಗ ಮತ್ತೆ ಈಡಿ ಅಧಿಕಾರಿ ಡೀಲ್ ಪ್ರಕರಣದಲ್ಲಿ ಬಹಿರಂಗವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version