ದಿನದ ಸುದ್ದಿ
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜನಾರ್ಧನ ರೆಡ್ಡಿ ಮಾಡಿದ್ರು ತುಳಸಿ ಪೂಜೆ; ಇಂದು ಜಾಮೀನು ವಿಚಾರಣೆ
ಸುದ್ದಿದಿನ ಬೆಂಗಳೂರು: ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಪರಪ್ಪನ ಅಗ್ರಾಹಾರದಲ್ಲಿ ತುಳಸಿ ಕಟ್ಟೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಪೂಜೆ ಸಲ್ಲಿಸಿ ತಮಗೆ ಜಾಮೀನು ಸಿಗಲೆಂದು ಬೇಡಿಕೊಂಡರು. ಆನಂತರ ಜೈಲಿನಲ್ಲಿನ ನೀಡುವ ಉಪಹಾರದ ಬದಲು ಚಾಲುಕ್ಯ ವೃತ್ತದಲ್ಲಿರುವ ಇಡ್ಲಿ, ವಡೆ ತರಿಸಿಕೊಂಡು ಸೇವನೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಆಂಬಿಡೆಂಟ್ ಪ್ರಕರಣದಲ್ಲಿ 20 ಕೋಟಿ ಡೀಲ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಾಹಾರ ಸೇರಿದ್ದರು. ಸಾಲು ಸಾಲು ರಜೆಗಳು ಬಂದಿದ್ದರಿಂದ ಜಾಮೀನು ಮಂಜೂರು ಮುಂದಕ್ಕೆ ಹೋಗಿತ್ತು. ಇಂದು ಜಾಮೀನು ಮಂಜೂರು ಕುರಿತ ತೀರ್ಪು ಹೊರಬೀಳಲಿದೆ. ಅದಕ್ಕಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಬುಧವಾರ ಬೆಳಗ್ಗೆ ಪರಪ್ಪನ ಅಗ್ರಾಹಾರದಲ್ಲಿ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿದರು. ಆನಂತರ ಜೈಲಿನಲ್ಲಿನ ನೀಡುವ ಉಪಹಾರದ ಬದಲು ಚಾಲುಕ್ಯ ವೃತ್ತದಲ್ಲಿರುವ ಇಡ್ಲಿ, ವಡೆ ತರಿಸಿಕೊಂಡು ತಿಂದರು ಎಂದು ಮೂಲಗಳು ತಿಳಿಸಿವೆ.
ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಿಚಾರಣೆ ವೇಳೆ ಪೋಲೀಸರ ತನಿಖಾ ಕ್ರಮವನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401