/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

‘ಕಿಚ್ಚ’ನಿಗೆ ಶುಭ ಕೋರಿದ ಜನಾರ್ಧನ ರೆಡ್ಡಿ

Published

on

ಸುದ್ದಿದಿನ ಡೆಸ್ಕ್ | ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ನೇತೃತ್ವದಲ್ಲಿ ಸೆಪ್ಟೆಂಬರ್ 8 ಮತ್ತು 9ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕೆಸಿಸಿ (ಕನ್ನಡ ಚಲನಚಿತ್ರ ಕ್ರಿಕೆಟ್ ಕಪ್) ಎರಡನೇ ಆವೃತ್ತಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಭ ಕೋರಿದ್ದಾರೆ.

ಸ್ಯಾಂಡಲ್‍ವುಡ್ ತಾರೆಯರು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಇರುವ ಕ್ರೀಡಾಪ್ರತಿಭೆ ಬೆಳಕಿಗೆ ತರಲು ನಟ ಸುದೀಪ್ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿರುವುದು ಅತೀವ ಸಂತಸ ತಂದಿದೆ. ಪ್ರಕ್ರಿಯೆಯಲ್ಲೂ ಅವರು ನನ್ನನ್ನು ತೊಡಗಿಸಿಕೊಂಡಿದ್ದಾರೆ. ಇದರ ಯಶಸ್ಸಿಗೆ ಅವರಿಗೆ ಸಾಥ್ ನೀಡಲು ಹರ್ಷವೆನಿಸುತ್ತಿದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಸಲು ನಟ ಸುದೀಪ್ ತಾರೆಯರ ಕ್ರಿಕೆಟ್ ಹಮ್ಮಿಕೊಂಡಿರುವುದು ಅಪಾರ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಕೆಸಿಸಿ ಮೊದಲ ಆವೃತ್ತಿಯನ್ನು ಸುದೀಪ್ ಯಶಸ್ವಿಯಾಗಿ ನಡೆಸಿದ್ದರು. ಅವರೊಂದಿಗೆ ನಾನೂ ಕೈಜೋಡಿಸಿದ್ದೆ.

ಈ ಬಾರಿಯ ಕೆಸಿಸಿಯಲ್ಲಿ ಒಟ್ಟು ಆರು ತಂಡಗಳು ಸೆಣಸಲಿವೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕಾರ್ತಿಕ ಗೌಡ, ಜಾಕ್ ಮಂಜು, ನಿರ್ದೇಶಕರಾದ ನಂದಕಿಶೋರ್, ಕೃಷ್ಣ ಹಾಗೂ ಸದಾಶಿವ ಶೆಣೈ ಈ ತಂಡಗಳ ನಾಯಕತ್ವ ವಹಿಸಿದ್ದಾರೆ. ಇವರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು, ಸಿನೆಮಾ ನಟರು ಕೂಡ ಭರ್ಜರಿ ಬ್ಯಾಟ್ ಬೀಸಲಿದ್ದಾರೆ. ಈ ಬಾರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸುತ್ತಿರುವುದು ವಿಶೇಷ.

ಯಾವ ತಂಡದಲ್ಲಿ ಯಾರು

ಕದಂಬ ಲಯನ್ಸ್ ತಂಡದಲ್ಲಿ ಸುದೀಪ್ ಜೊತೆ ವೀರೇಂದ್ರ ಸೆಹವಾಗ್ ಆಡಲಿದ್ದಾರೆ. ಹೊಯ್ಸಳ ಈಗಲ್ಸ್ ತಂಡದಲ್ಲಿ ಉಪೇಂದ್ರ ಅವರೊಂದಿಗೆ ಹರ್ಷೆಲ್ ಗಿಬ್ಸ್ ಕಣಕ್ಕೆ ಇಳಿಯಲಿದ್ದಾರೆ. ಒಡೆಯರ್ ಚಾರ್ಜರ್ಸ್ ತಂಡದಲ್ಲಿ ನಟ ಗಣೇಶ ಅವರೊಂದಿಗೆ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಆಡಲಿದ್ದಾರೆ. ಗಂಗಾ ವಾರಿಯರ್ಸ್ ತಂಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಲ್‍ರೌಂಡರ್ ಲಾನ್ಸ್ ಕ್ಲೂಸ್ನರ್ ಬ್ಯಾಟಿಂಗದ ಮಾಡಲಿದ್ದಾರೆ. ರಾಷ್ಟ್ರಕೂಟ ಪ್ಯಾಂಥರ್ಸ್ ಟೀಮ್‍ನಲ್ಲಿ ಓವೈ ಷಾ ಹಾಗೂ ಯಶ್ ಕ್ರೀಡಾಕೌಶಲ್ಯ ಪ್ರದರ್ಶಿಸಲಿದ್ದಾರೆ. ಇನ್ನು ವಿಜಯನಗರ ಪೇಟ್ರಿಯಾಟ್ಸ್ ತಂಡದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ಅವರೊಂದಿಗೆ ಆಸೀಸ್ ಕ್ರಿಕೆಟ್ ತಂಡದ ಮಾಜಿ ವಿಕೆಟ್‍ಕೀಪರ್ ಆ್ಯಡಂ ಗಿಲ್‍ಕ್ರಿಸ್ಟ್ ಆಡಲಿದ್ದಾರೆ.

ಆರು ತಂಡಗಳ ಆಟಗಾರರ ಪ್ರಕ್ರಿಯೆಯಲ್ಲಿ ಸುದೀಪ್ ಅವರು ನನ್ನನ್ನು ತೊಡಿಕೊಳ್ಳಲು ಅವಕಾಶ ನೀಡಿದ್ದು ಹರ್ಷ ತಂದಿದೆ. ಸುದೀಪ್ ಅವರ ಶ್ರಮ ಸಾರ್ಥಕವಾಗಿದೆ ಎಂದು ವಿಶ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version