ರಾಜಕೀಯ
‘ಜಾರ್ಜ್ ಫರ್ನಾಂಡೀಸ್’ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ಸುದ್ದಿದಿನ ಡೆಸ್ಕ್ : ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡೀಸ್ (88) ಇಂದು (ಮಂಗಳವಾರ) ಬೆಳಗ್ಗೆ 7ಗಂಟೆಗೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಧೀರ್ಗಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಹಲವು ವರ್ಷಗಳಿಂದ ಕೋಮಾದಲ್ಲಿದ್ದರು. ನಿಧನರಾದ ಜಾರ್ಜ್ ಫರ್ನಾಂಡೀಸ್ ಅವರಿಗೆ ಭಾವಪೂರ್ಣವಾದ ಸಂತಾಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್
ಜಾರ್ಜ್ ಫರ್ನಾಂಡಿಸ್ ನಿಧನದಿಂದ ಆಘಾತಕೀಡಾಗಿದ್ದೇನೆ. ಸಮಾಜವಾದಿ ಚಳುವಳಿಯ ನೇತಾರರಾಗಿದ್ದ ಜಾರ್ಜ್ ನನಗೆ ರಾಜಕೀಯ ಸಂಗಾತಿಯಾಗಿದ್ದದ್ದು ಮಾತ್ರವಲ್ಲ ಹಿರಿಯಣ್ಣನಂತೆ ಮಾರ್ಗದರ್ಶಕರಾಗಿದ್ದರು. ಅವರನ್ನು ಕಳೆದುಕೊಂಡ ದು:ಖ ಮಾಯುವಂತಹದ್ದಲ್ಲ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/i0csycjdCH
— Siddaramaiah (@siddaramaiah) January 29, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401