ಸಿನಿ ಸುದ್ದಿ

ಜಯಂತ್ ಕಾಯ್ಕಿಣಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಟ್ಟರು ನೆನೆದ ಕಾಮಿಡಿ ಟಾಕ್ ; ನೀವೂ ಕೇಳಿ..!

Published

on

ಸುದ್ದಿದಿನ ಡೆಸ್ಕ್ : ಕನ್ನಡದ ಸೃಜನಶೀಲ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿಯವರ ಜೋಡಿಯ ‘ಮುಂಗಾರುಮಳೆ’ ಸಿನೆಮಾ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ‘ಅನಿಸುತಿದೆ ಯಾಕೋ ಇಂದು’ ಎಂಬ ಹಾಡಿನ ಸಾಹಿತ್ಯ ಮೆಚ್ಚದ ಕನ್ನಡಿಗನೇ ಇಲ್ಲ. ಅಷ್ಟರ ಮಟ್ಟಿಗೆ ಈ ಸಿನೆಮಾದ ಈ ಹಾಡು, ಸಂಗೀತ ಜನಮನ ಸೆಳೆಯಿತು.

‘ಮುಂಗಾರು ಮಳೆ’ ಸಿನೆಮಾದಿಂದ ಶುರುವಾದ ಭಟ್ಟರ ಹಾಗೂ ಕಾಯ್ಕಿಣಿಯವರ ಸಿನಿ ಜರ್ನಿ ‘ಭಟ್ಟರ ‘ ಗಾಳಿಪಟ2’ ವರೆಗೂ ಮುಂದುವರೆದಿದೆ. ಅದು ಮುಂದುವರಿಯುತ್ತಲೂ ಇರುತ್ತದೆ ಕೂಡ. ಎಕೆಂದರೆ ಅವರಿಬ್ಬರ ಸಾಹಿತ್ಯ ಸಾಂಗಂತ್ಯ ಹೃದಯಶ್ರೀಮಂತಿಕೆಗೆ ತಳಪಾಯವಾಗಿದೆ.

ಅಂದಹಾಗೆ ಸದಾ ಹಸನ್ಮುಖಿಯಾದ ಕಾಯ್ಕಿಣಿಯವರ ಹುಟ್ಟು ಹಬ್ಬವಿಂದು. ಈ ಸಂದರ್ಭದಲ್ಲಿ ಭಟ್ಟರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವರಿಬ್ಬರ ನಡುವಿನ ಕಾಮಿಡಿ ಟಾಕ್ ನ ಝಲಕ್ ವೊಂದನ್ನು ಹಂಚಿಕೊಂಡಿದ್ದಾರೆ. ನೀವೂ ಕೇಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version