ದಿನದ ಸುದ್ದಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಂಟಿ ನಿರ್ದೇಶಕರ ಭೇಟಿ

Published

on

ಸುದ್ದಿದಿನ,ದಾವಣಗೆರೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚೆಗೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಸಿ. ರಾಜಶೇಖರ ಹೆಬ್ಬಾರ್ ಭೇಟಿ ನೀಡಿ ಪರಿಶೀಲಿಸಿದರು.

ನಂತರ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ಅಲ್ಲಿನ ಸ್ವಯಂ ಸೇವಕರೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಗೀತೆಯನ್ನು ಹಾಡಿ ತಮಟೆ ಬಾರಿಸಿದರು. ಬಳಿಕ ಕಾಲೇಜು ಮತ್ತು ಅಲ್ಲಿನ ವ್ಯವಸ್ಥೆ ನೋಡಿ ಕಾಲೇಜಿನ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ ಅಂಜಿನಪ್ಪ, ಎನ್.ಎಸ್.ಎಸ್ ಸಂಚಾಲಕರಾದ ಪ್ರೊ. ಗಿರಿಸ್ವಾಮಿ, ನಿಕಟಪೂರ್ವ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಭೀಮಣ್ಣ ಸುಣಗಾರ, ಪ್ರೊ. ರುದ್ರಪ್ಪ, ಘಟಕ-1 ರ ಕಾರ್ಯಕ್ರಮಾಧಿಕಾರಿಯಾದ ಪ್ರೊ. ಗುರುದೇವ್ ಮತ್ತು ಬೋದಕ /ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version