ರಾಜಕೀಯ
ಲೋಕಸಭೆ ಉಪಚುನಾಣೆ : ರಣತಂತ್ರ ರೂಪಿಸಲು ಸಂಜೆ ಸಭೆಕರೆದಿದ್ದಾರೆ ಎಚ್.ಡಿ.ಕೆ
ಸುದ್ದಿದಿನ ಡೆಸ್ಕ್ : ಸಿ.ಎಂ.ಕುಮಾರಸ್ವಾಮಿ ಇಂದು ಸಂಜೆ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಯನ್ನು ಶ್ರೀರಂಗಪಟ್ಟಣದಲ್ಲಿ ಕರೆದಿದ್ದಾರೆ. ಎಚ್ ಡಿ ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಇವರು ಶ್ರೀರಂಗಪಟ್ಟಣ ಖಾಸಗಿ ಹೊಟೆಲ್ ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರದ ಪರ ಮೂವರು ಜೆಡಿಎಸ್
ಮತ್ತು ಎರಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಜೆಡಿಎಸ್ ನಾಯಕರಿಗೆ ಚುನಾವಣಾ ಉಸ್ತುವಾರಿ ನೀಡಬೇಕು ಎಂಬ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಟಿಕೆಟ್ ವಂಚಿತರಾಗಿರುವವರನ್ನ ಸಮಾಧಾನ ಪಡಿಸುವ ಸಂಬಂಧವೂ ಮಾತುಕತೆ ನಡೆಯಲಿದೆ.
ನಿಗಮ ಮಂಡಳಿ ಹಾಗೂ ಸಂಪುಟ ವಿಸ್ತರಣೆ ವಿಚಾರವೂ ಪ್ರಸ್ತಾಪವಾಗಲಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಹ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಶಾಸಕಾಂಗ ಸಭೆಗೆ ಎಲ್ಲ ಶಾಸಕರು, ಮೇಲ್ಮನೆ ಸದಸ್ಯರಿಗೆ ಆಹ್ವಾನ ನೀಡಲಾಗಿದೆ.ಉಪಚುನಾವಣೆಗೆ ರಣತಂತ್ರ ರೂಪಿಸುವ ಕುರಿತು ಸಹ ಚರ್ಚೆ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401