ರಾಜಕೀಯ

ಜೆಡಿಎಸ್ ಎಂಎಲ್ಸಿಗಳಿಗೆ ಸಚಿವ ಸ್ಥಾನ ಇಲ್ಲ

Published

on

ಸುದ್ದಿದಿನ,ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ‌.ಕುಮಾರಸ್ವಾಮಿ ಅವರು ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಜೆಡಿಎಸ್ ನ ಎಂ.ಎಲ್.ಸಿಗಳಿಗೆ ಯಾವುದೇ ಸಚಿವ ಸ್ಥಾನವನ್ನು ನೀಡದಿರಲು ನಿರ್ಧರಿಸಲಾಗಿದೆ. ಆದರೂ ಈ ಹಿನ್ನೆಲೆಯಲ್ಲಿ ಜೆಡಿಎಸ್ ನಲ್ಲಿ ಮಂತ್ರಿಗಿರಿಗೆ ಕಸರತ್ತು ನಡೆಯುತ್ತಲೇ ಇದೆ.

ಬುಧವಾರ (ಜೂನ್06) ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಜೆಡಿಎಸ್ ಪಕ್ಷವು ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಲಾಗದು ಎಂಬ ತೀರ್ಮಾನ ತೆಗೆದು ಕೊಂಡಿದೆ.

ನಗರದ ಪದ್ಮನಾಭ ನಗರದಲ್ಲಿರುವ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಜೆಡಿಎಸ್ ನ ಎಂಎಲ್ಸಿಗಳ ಪೈಕಿ ಸಧ್ಯಕ್ಕೆ ಬಸವರಾಜ ಹೊರಟ್ಟಿ ಮತ್ತು ಬಿ.ಎಂ.ಫಾರುಯಕ್ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version