ದಿನದ ಸುದ್ದಿ

ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

Published

on

ಸುದ್ದಿದಿನಡೆಸ್ಕ್:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಇಂದು ಪ್ರಸಕ್ತ ವರ್ಷದ ಜಂಟಿ ಪ್ರವೇಶ ಪರೀಕ್ಷೆ – ಜೆಇಇ ಮುಖ್ಯ ಫಲಿತಾಂಶ -2 ಅನ್ನು ಪ್ರಕಟಿಸಿದೆ. ಈ ಭಾರಿ ಒಟ್ಟು 24 ವಿದ್ಯಾರ್ಥಿಗಳು ಶೇಕಡ ನೂರಕ್ಕೆ ನೂರು ಅಂಕಗಳಿಸಿದ್ದಾರೆ.

ಎನ್‌ಟಿಎ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಕಟ್-ಆಫ್ ಸಮೇತವಾಗಿ ಪ್ರಕಟಿಸಿದ್ದು, ಫಲಿತಾಂಶ ಜಾಲತಾಣ
jeemain.nta.nic.in ದಲ್ಲಿ ಲಭ್ಯವಿದೆ. ಜೆಇಇ ಮೇನ್‌ನ ಏಪ್ರಿಲ್ ಸೆಷನ್‌ಅನ್ನು ಇದೇ ತಿಂಗಳ 2 ರಿಂದ 9ರ ನಡುವೆ ಎನ್‌ಟಿಎ ನಡೆಸಿತ್ತು. ಸೆಷನ್-2ರ ಪತ್ರಿಕೆ – 1 ಕ್ಕೆ 6 ಲಕ್ಷದ 81 ಸಾವಿರದ 871 ವಿದ್ಯಾರ್ಥಿನಿಯರು ಹಾಗೂ 3 ಲಕ್ಷದ 10 ಸಾವಿರದ 479 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9 ಲಕ್ಷದ 92 ಸಾವಿರದ 350 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಇದನ್ನೂ ಓದಿ :

ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ‌‌ ಕಾರ್ಯನಿರ್ವಹಣಾ ಸಮಿತಿ ರಚನೆ

ಜೆಇಇ ಮೇನ್-2025 ಈ ವರ್ಷ ಜನವರಿ ಮತ್ತು ಏಪ್ರಿಲ್‌ನಲ್ಲಿ ಎರಡು ಸುತ್ತುಗಳಲ್ಲಿ ನಡೆಸಲಾಗಿದೆ. ಎರಡು ಬಾರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ಎರಡರಲ್ಲಿ ಉತ್ತಮ ಅಂಕಗಳಿಸಿದ ಪರೀಕ್ಷೆಯನ್ನು ಅಂತಿಮ ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version