ಸಿನಿ ಸುದ್ದಿ
ಜೆನಿಫರ್ ಲಾರೆನ್ಸ್ ಖಾಸಗಿ ಫೋಟೊ ಕದ್ದ ಹ್ಯಾಕರ್ ಗೆ ಜೈಲುವಾಸ
ಸುದ್ದಿದಿನ ಡೆಸ್ಕ್: ಜೆನಿಫರ್ ಲಾರೆನ್ಸ್ ಮತ್ತಿತರ ಹಾಲಿವುಡ್ ನಟಿಯರ ಖಾಸಗಿಯಾಗಿದ್ದ ಫೋಟೋಗಳನ್ನು ಕದ್ದಿದ್ದ ಹ್ಯಾಕರ್ ಗೆ ಅಮೆರಿಕಾ ಬ್ರಿಡ್ಜ್ ಪೋರ್ಟ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಎಂಟು ತಿಂಗಳ ಸೆರೆವಾಸ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಮೂರು ವರ್ಷಗಳ ಜೈಲು ಶಿಕ್ಷೆ ಪೂರೈಸಿದ ನಂತರ ಆದೇಶ ನೀಡಿದೆ.
ಜಾರ್ಜ್ ಗ್ಯಾರೋಫಾನೋ ಹಾಲಿವುಡ್ ನಟಿಯರ ಖಾಸಗಿ ಫೋಟೊ ಕದ್ದ ಸಿಕ್ಕಿಬಿದ್ದಿರುವ ಹ್ಯಾಕರ್. ಜೆನಿಫರ್ ಲಾರೆನ್ಸ್ ಸೇರಿ 240 ಮಂದಿಯ ಪ್ರವೇಟ್ ಆ್ಯಪಲ್ ಐಕ್ಲೌಡ್ ಖಾತೆಯಿಂದ ಖಾಸಗಿ ಫೋಟೊ ಕದ್ದಿದ್ದ. ಇದು ಅಂತರ್ಜಾಲದಲ್ಲಿ ವೈರಲಾಗಿ ಹರಿದಾಡಿತ್ತು.
‘ಡಿ ಬಾಸ್’ ಮಡದಿಗೆ ಕಿರುಕುಳ ನೀಡಿದ ಕಿಡಿಗೇಡಿ
2014ರ ಹ್ಯಾಕಿಂಗ್ ಸ್ಕ್ಯಾಂಡಲಿನ ನಾಲ್ವರು ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದಾನೆ. ಜೆನಿಫರ್ ಲಾರೆನ್ಸ್, ಕೇಟ್ ಅಪ್ಟನ್, ಕರ್ಸ್ಟನ್ ಡನ್ಸ್ಟ್ ಮತ್ತಿತರ ಖಾಸಗಿ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪಬ್ಲಿಶ್ ಮಾಡಲಾಗಿತ್ತು. ಫೋಟೊ ಕದ್ದಿರುವ ಪ್ರಕರಣವನ್ನು ಸೆಕ್ಸ್ ಅಪರಾಧಕ್ಕೆ ಸಮಾನವಾದುದು. ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೇಲೆ ಸಿಸಿಬಿ ಕಣ್ಣು..!
ಆ್ಯಪಲ್ ಕಂಪನಿಯ ಆನ್‌ಲೈನ್ ಭದ್ರತಾ ನೆಪದಲ್ಲಿ ಬಳಕೆದಾರರ ಹೆಸರು ಮತ್ತು ಪಾಸ್ ವರ್ಡ್ ಗಳನ್ನು ಪಡೆದುಕೊಂಡಿದ್ದ. ಇದನ್ನು ಆರೋಪಿ ಏಪ್ರಿಲ್‌ನಲ್ಲಿ ತಪ್ಪೊಪ್ಪಿಕೊಂಡಿದ್ದ. ಇತರ ಮೂವರು ಹ್ಯಾಕರ್ಸ್.ಗಳಿಗೆ ಈಗಾಗಲೇ ಒಂಭತ್ತು ತಿಂಗಳ ಮತ್ತು 18 ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401