ಸಿನಿ ಸುದ್ದಿ
ರಿಷಬ್ ಶೆಟ್ಟಿ ಚಿತ್ರ ಹಾಡಿಗೆ ಸರಿಗಮಪ ಸ್ಪರ್ಧಿ ಜ್ಞಾನೇಶ ಧ್ವನಿ
ಸುದ್ದಿದಿನ ಡೆಸ್ಕ್ | ಸರಿಗಮಪ ಲಿಟಲ್ ಚಾಂಪ್ ಸೀಸನ್ 14ರ ಸ್ಪರ್ಧಿ ಜ್ಞಾನೇಶ ಬಳ್ಳಾರಿ ರಿಷಬ್ ಶೆಟ್ಟಿ ನಿರ್ದೇಶನದ ‘ಸ.ಹಿ.ಪ್ರಾ. ಶಾಲೆ’ ಚಿತ್ರದ ಹಾಡೊಂದಕ್ಕೆ ಧ್ವನಿ ನೀಡಿದ್ದಾನೆ. ಈ ಮೂಲಕ ಸ್ಯಾಂಡಲ್ವುಡ್.ಗೆ ಪ್ಲೇಬ್ಯಾಕ್ ಸಿಂಗರ್ ಆಗಿ ಪದಾರ್ಪಣೆ ಮಾಡಿದ್ದಾನೆ.
ಸ್ಯಾಂಡಲ್ವುಡ್ ನಲ್ಲಿ ಸಿನಿಪ್ರಿಯ ಮನ ಗೆಲ್ಲಲು ಹೆಜ್ಹೆಯಿರಿದ್ದಾನೆ. ರಿಷಬ್ ಶೆಟ್ಟಿ ಜ್ಞಾನೇಶ ಬಗ್ಗೆ ಮೂಲ ಚ್ಚುಗೆ ವ್ಯಕ್ತಪಡಿಸಿದ್ದು, “ಜ್ಞಾನೇಶ” ಪ್ರತಿಭಾವಂತ ಹಾಡುಗಾರ, ನಮ್ಮ ತಂಡದಲ್ಲಿ ಜ್ಞಾನೇಶ ಇರುವುದು ಹೆಮ್ಮೆಯಾಗುತ್ತದೆ ಎಂದು ಹೊಗಳಿದ್ದಾರೆ. *ಸ.ಹಿ.ಪ್ರಾ. ಶಾಲೆ* ಚಿತ್ರವು ಆಗಸ್ಟ್ ೧೬ರಂದು ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಜ್ಞಾನೇಶ ಬಳ್ಳಾರಿ ಚಾನೆಲ್ ಒಂದರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್| 9986715401