ದಿನದ ಸುದ್ದಿ

ಕವಿ ನೀಲಮಣಿ ಫೂಕನ್ ಗೆ ಜ್ಞಾನಪೀಠ ಪುರಸ್ಕಾರ

Published

on

ಸುದ್ದಿದಿನ ಡೆಸ್ಕ್ : ಹೆಸರಾಂತ ಅಸ್ಸಾಮಿ ಕವಿ ನೀಲಮಣಿ ಫೂಕನ್ ಅವರಿಗೆ ದೇಶದ ಅತ್ಯುನ್ನತ ಸಾಹಿತ್ಯಿಕ ಪ್ರಶಸ್ತಿ, ಜ್ಞಾನಪೀಠ ಪುರಸ್ಕಾರವನ್ನು ಇಂದು ಗುವಾಹಟಿಯಲ್ಲಿ ಪ್ರಧಾನ ಮಾಡಲಾಗುವುದು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಜ್ಞಾನಪೀಠ ಪ್ರಶಸ್ತಿಗಾಗಿ ಹೆಸರಿಸಲಾಗಿತ್ತು. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಗುವಾಹಟಿಯಲ್ಲಿ ಪ್ರದಾನ ಮಾಡಲಾಗುತ್ತಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಜ್ಞಾನಪೀಠ ಸಮಿತಿಯ ಸದಸ್ಯರೆಲ್ಲರೂ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಜುರಿಯಾ ಹೇನು ನಾಮಿ ಆಹೆ ಇ ನೋಡಿಯೆಡಿ, ಕಬಿತಾ ಮತ್ತು ಗುಲಾಪಿ ಜಾಮುರ್ ಲಗ್ನ ಇವು ಫುಕನ್ ಅವರ ಹೆಸರಾಂತ ಕೃತಿಗಳಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version