ರಾಜಕೀಯ
ಜೆ.ಎನ್.ಯು ಚುನಾಚಣೆ : ಯುನೈಟೆಡ್ ಲೆಫ್ಟ್ ಅಲೈಯನ್ಸ್ ಗೆ ಗೆಲುವು
ಸುದ್ದಿದಿನ ಡೆಸ್ಕ್: ದೇಶದ ಗಮನ ಸೆಳೆದಿರುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್.ಯು) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯರು ಮೇಲುಗೈ ಸಾಧಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಯುನೈಟೆಡ್ ಲೆಫ್ಟ್ ಅಲೈಯನ್ಸ್ ಗೆಲುವು ಸಾಧಿಸಿದೆ.
ಅಧ್ಯಕ್ಷರಾಗಿ ಎನ್. ಸಾಯಿ ಬಾಲಾಜಿ 1,000 ಮತಗಳ ಅಂತರದಲ್ಲಿ ವಿಜಯಭೇರಿ ಬಾರಿಸಿದ್ದಾರೆ. ಉಪಾಧ್ಯಕ್ಷರಾಗಿ ಸಾರಿಕಾ ಚೌಧರಿ ಮತಗಳ ಅಂತರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಏಜಾಜ್ ಅಹ್ಮದ್ ರಾಥರ್, ಜಂಟಿ ಕಾರ್ಯದರ್ಶಿಯಾಗಿ ಅಮುತ ಜಯದೀಪ್ ಆಯ್ಕೆಯಾಗಿದ್ದಾರೆ.
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ಎ), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ (ಡಿಎಸ್ಎಫ್) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್ಎಫ್) ಮೈತ್ರಿಯೊಂದಿಗೆ ಎಡಪಂಥೀಯ ಬೆಂಬಲ ಹೊಂದಿದೆ.
ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಎಐಎಸ್ಎ ಸಂಘಟನೆಯ ಎನ್. ಸಾಯಿ ಬಾಲಾಜಿ 2,161 ಮತ ಪಡೆಯುವ ಮೂಲಕ ಎಬಿವಿಪಿಯ ಲಲಿತ್ ಪಾಂಡೆಯನ್ನು 1,179 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಡಿಎಸ್ಎಫ್.ನ ಸಾರಿಕಾ ಚೌಧರಿ 2,692 ಮತ ಪಡೆದು ಎಬಿವಿಪಿಯ ಗೀತಾಸ್ರಿ ಬೊರುವಾ ಅವರನ್ನು 1,680 ಮತಗಳ ಅಂತರದಲ್ಲಿ ಹಿಂದಿಕ್ಕಿದ್ದಾರೆ. ಎಸ್ಎಫ್ಐನ ಏಜಾಜ್ ಅಹಮದ್ ರಾಥರ್ 2,423 ಪಡೆದು ಪ್ರತಿಸ್ಪರ್ಧಿ ಎಬಿವಿಪಿಯ ಗಣೇಶ್ ಗುರ್ಜರನ್ನು 1,300 ಮತಗಳ ಸೋಲಿಸಿದ್ದಾರೆ. ಎಐಎಸ್ಎಫ್.ನ ಅಮುತ 2,047 ಮತಗಳನ್ನು ಪಡೆದು ಎಬಿವಿಪಿಯ ವೆಂಕಟ್ ಚೌಬೆಯನ್ನು 800 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401