ದಿನದ ಸುದ್ದಿ
ನಾಳೆ ವಿಕಲಚೇತನರಿಗೆ ಉದ್ಯೋಗ ಮೇಳ
ಸುದ್ದಿದಿನ, ಬೆಂಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶ್ರವಣದೋಷ, ದೃಷ್ಟಿಹೀನ ಹಾಗೂ ದೈಹಿಕ ವಿಕಲತೆ ಹೊಂದಿರುವ ವಿಕಲಚೇತನರಿಗೆ ಫೆಬ್ರವರಿ, 24 ರಂದು ಬೆಂಗಳೂರಿನ ಕೆಎಸ್‍ಆರ್ ಪಿ ಕ್ರೀಡಾ ಮೈದಾನ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಮಡಿವಾಳ ಮಾರುಕಟ್ಟೆಯ ಹತ್ತಿರ, ಕೋರಮಂಗಲ ಇಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಹತ್ತನೆ ತರಗತಿ, ದ್ವಿತೀಯ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮ ಮತ್ತು ಪದವಿ ಉತ್ತೀರ್ಣರಾಗಿರುವ ವಿಕಲಚೇತನರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿಕಲಚೇತನರು ಕಡ್ಡಾಯವಾಗಿ www.weareyourevoice.org ನಲ್ಲಿ ನೋಂದಾಯಿಸಿಕೊಳ್ಳುವಂತೆ ಕೋರಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ. 7557550888, 75507550999, 9700799993, 9551500061 ನ್ನು ಸಂಪರ್ಕಿಸಬಹುದು.
ಈ ಉದ್ಯೋಗ ಮೇಳದ ಪ್ರಯೋಜನವನ್ನು ಕೊಡಗು ಜಿಲ್ಲೆ ವಿಕಲಚೇತನರು ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ಪಿ.ದೇವರಾಜು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401