ದಿನದ ಸುದ್ದಿ

ದಾವಣಗೆರೆಯಲ್ಲಿ ನಾಳೆ ಉದ್ಯೋಗ ಮೇಳ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ ಇವರ ವತಿಯಿಂದ ಏ.29 ರಂದು ಬೆಳಗ್ಗೆ 10 ಗಂಟೆಗೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ “ಮಿನಿ ಉದ್ಯೋಗ ಮೇಳ”ವನ್ನು ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ.

ಏ.29 (ಶುಕ್ರವಾರ) ರಂದು ಬೆಳಗ್ಗೆ 9:30 ಗಂಟೆಗೆ ವಿದ್ಯಾರ್ಹತೆ ದಾಖಲೆ, ಸ್ವ ವಿವರದ ಜೊತೆಗೆ ಆಧಾರ್ ಕಾರ್ಡ್ ನೊಂದಿಗೆ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ 08192-259446, 6361550016, 7406323294 ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಗಿರೀಶ ಕೆ. ಎನ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version