ದಿನದ ಸುದ್ದಿ

ಕೊಪ್ಪಳ ಜಿಲ್ಲಾ ಮಟ್ಟದ ಉದ್ಯೋಗ ಮೇಳ | ನಾಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

Published

on

ಸುದ್ದಿದಿನ,ಕೊಪ್ಪಳ : ಜಿಲ್ಲಾ ಮಟ್ಟದ ‘ಉದ್ಯೋಗ ಮೇಳ‘ ದ ಹಿನ್ನೆಲೆಯಲ್ಲಿ ‘ಸದರಿ ಸಮಿತಿಗಳ ಸಭೆ’ಯನ್ನು ಮಾರ್ಚ್ 6 ನೇ ತಾರೀಖು ( ಶುಕ್ರವಾರ) ಬೆಳಗ್ಗೆ 10 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಇದೇ ಮಾರ್ಚ್ 14 ಮತ್ತು 15 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೊಂದಾಯಿಸಿ

http://117.220.197.248/jobfair_koppal/

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿ ಇರುವ ಉದ್ಯೋಗಾಕಾಂಕ್ಷಿಗಳಿಗೆ ಈಗಾಗಲೇ ಕೊಪ್ಪಳ ಜಿಲ್ಲಾಡಳಿತದಿಂದಅನಾವರಣಗೊಳಿಸಲಾಗಿರುವ ಜಾಲತಾಣ https:/koppal.nic.in/ ನಲ್ಲಿ ನೋಂದಾಯಿಸಲು ಅವಕಾಶ
ಕಲ್ಪಿಸಲಾಗಿರುತ್ತದೆ.

ಉದ್ಯೋಗ ಮೇಳದ ಹೆಚ್ಚಿನ ಮಾಹಿತಿಗೆ ಕರೆಮಾಡಿ

ಮೊಬೈಲ್ : 8105848991- 7022694905

Trending

Exit mobile version